ಧಾರವಾಡದ ಕೆಲಗೇರಿ ಕೆರೆಯಲ್ಲಿ “ಬೋಟ್‌ಗೆ ಬೆಂಕಿ”- ಬೆಂಕಿ ನಂದಿಸಲು ಶತಪ್ರಯತ್ನ…!!!

ಧಾರವಾಡ: ಕೆಲಗೇರಿ ಕೆರೆಯಲ್ಲಿ ನಿಲ್ಲಿಸಿದ್ದ ಬೋಟ್‌ಗೆ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೋಟ್ ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಕೆರೆಯಲ್ಲಿನ ಮೀನು ಹಿಡಿಯಲು ಬಳಕೆ ಮಾಡುತ್ತಿದ್ದ ಸುಮಾರು ಎಂಟು ಲಕ್ಷ ರೂಪಾಯಿ ಮೌಲ್ಯದ ಬೋಟ್‌ಗೆ ಅಪರಿಚಿತರು ಬೆಂಕಿ ಹಚ್ಚಿರುವ ಶಂಕೆಯಿದೆ.
ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಂದಿಸುವ ಯತ್ನದಲ್ಲಿದ್ದಾರೆ.