ಧಾರವಾಡ: ಕನ್ನಡ ಜಾಗೃತಿ ಸಮಿತಿಗೂ ರಾಜಕೀಯ ತಂದ “ಅವಿವೇಕಿಗಳು”… ಸಚಿವ ಸಂತೋಷ ಲಾಡ್ ಹೆಸರು ಕೆಡಿಸಲು ಮತ್ತೊಂದು ಯತ್ನ….!!!
ಪ್ರಾಧಿಕಾರಕ್ಕೆ ಸಚಿವ ಸಂತೋಷ ಲಾಡ್ ಅವರು ಕಾಂಗ್ರೆಸ್ ಸಮಿತಿ ಕೋರಿಕೆಯ ಮೇರೆಗೆ ಪತ್ರ ಬರೆದಿದ್ದಾರೆ. ಸಮಿತಿಯ ಪತ್ರ ವೈರಲ್ ಆಗದೇ ಸಚಿವರ ಪತ್ರವನ್ನ ಮಾತ್ರ ವೈರಲ್ ಮಾಡಲಾಗಿದೆ
ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಹೆಸರಿಗೆ ಕಪ್ಪು ಚುಕ್ಕೆ ಮೂಡಿಸುವ ಮತ್ತೊಂದು ಯತ್ನ ನಡೆದಿದ್ದು, ಆರೆಂಟು ತಿಂಗಳುಗಳ ಹಿಂದೆ ಗುರುತಿಸಲ್ಪಟ್ಟ ಕನ್ನಡ ಮನಸ್ಸುಗಳನ್ನ ಘಾಸಿಗೊಳಿಸುವ ಷಢ್ಯಂತ್ರ ರೂಪಗೊಂಡಿದೆ.
ಕನ್ನಡ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕನ್ನಡ ಜಾಗೃತಿ ಸಮಿತಿಗೆ ಜಯ ಕರ್ನಾಟಕದ ಸುಧೀರ ಮುಧೋಳ ಸೇರಿದಂತೆ ಐವರನ್ನ ಆಯ್ಕೆ ಮಾಡಿ ಅವರಿಗೆ ಆದೇಶವನ್ನ ಕಳಿಸಲಾಗಿತ್ತು. ಸಮಿತಿಯ ಜವಾಬ್ದಾರಿ ಹೊಂದಿದ್ದ ದ್ರಾಕ್ಷಾಯಣಿ ಎಂಬುವವರು ಅಚ್ಚುಕಟ್ಟಾಗಿ ಗುರುತಿಸಿದ್ದರೂ ಕೂಡ.

ಸೋಜಿಗವೆಂದರೇ, ಜಾತಿ ಆಧಾರಿತ ಮಾತುಗಳನ್ನ ಆಡಿ ತನ್ನನ್ನ ಸದಸ್ಯ ಮಾಡಿಲ್ಲವೆಂಬ ಕಾರಣಕ್ಕೆ ಕಥೆ ಸೃಷ್ಟಿಸಿದ ಮಹಾನುಭಾವನೋರ್ವ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮೂಲಕ ಸಚಿವರನ್ನ ದಾರಿ ತಪ್ಪಿಸುವ ಮಾಡಿದ್ದಾನೆಂದು ಹೇಳಲಾಗುತ್ತಿದೆ.
ಈಗಾಗಲೇ ಆಯ್ಕೆಯಾಗಿರುವ ಐವರು ಧಾರವಾಡ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುತ್ತಾರೆ. ಅವರಲ್ಲಿ ಎಲ್ಲ ಮತದವರಿದ್ದಾರೆ. ಹಾಗಾಗಿಯೂ, ಆಯ್ಕೆಯನ್ನ ತಡೆ ಹಿಡಿಯುವಂತೆ ಮಾಡಿರುವುದು ರಾಜಕೀಯದ ಪರಮಾವಧಿ ಎಲ್ಲಿಗೆ ಬಂದಿದೆ ಎಂದು ತೋರಿಸುತ್ತಿದೆ.
ಕನ್ನಡಪರ ಹೋರಾಟ ಮಾಡುತ್ತ ಬಂದಿರುವ ಸುಧೀರ ಮುಧೋಳ ಮತ್ತೂ ಇನ್ನುಳಿದ ನಾಲ್ವರನ್ನ ಆಯ್ಕೆ ಮಾಡಿದ್ದು ಏಕೆ ಮತ್ತೂ ಈಗ ಏಕೆ ಈ ಕಥೆ ಸೃಷ್ಟಿಸಲಾಗುತ್ತಿದೆ ಎಂಬುದನ್ನ ಸ್ಪಷ್ಟಪಡಿಸಲು ಯಾರೂ ಮುಂದಾಗುತ್ತಾರೆ.
ಜಾತಿಯನ್ನ ದೇಹದಲ್ಲಿ ತುಂಬಿಕೊಂಡು ಜಾಗೃತಿ ಸಮಿತಿಗೆ ಬರಬೇಕೆಂಬ ನೀಚ ಮನಸ್ಥಿತಿ ಹೊಂದಿರುವ ಮುಖವಾಡಗಳನ್ನ ಸಚಿವ ಸಂತೋಷ ಲಾಡ್ ಅವರು ಕಳಚಬೇಕಿದೆ. ಇಲ್ಲದಿದ್ದರೇ, ಈಗಾಗಲೇ ಆಯ್ಕೆಯಾಗಿರುವವರು ಮತ್ತೂ ಅವರ ಬೆಂಬಲಿಗರು ನಿಮ್ಮನ್ನ ಕ್ಷಮಿಸಲಾರರು.
ಆಯ್ಕೆಯಾಗಿದ್ದ ಸಮಿತಿ ಸದಸ್ಯರಿಗೆ ಅಧ್ಯಕ್ಷರು ರವಾನಿಸಿರುವ ವಾಟ್ಸಾಫ್ ಸಂದೇಶ
ಮಾನ್ಯರೇ,
ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಎಸ್ ಲಾಡ್ ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಬರೆದಿರುವ ಪತ್ರವನ್ನು ತಮ್ಮ ಅವಗಾಹನೆಗಾಗಿ ಸಲ್ಲಿಸುತ್ತಾ, ಧಾರವಾಡ ಜಿಲ್ಲೆಯ ಕನ್ನಡ ಜಾಗೃತಿ ಸಮಿತಿಯ ಎಲ್ಲ ಸದಸ್ಯರು ದಿನಾಂಕ: 07-11-2025ರಂದು ಕೊ.ಸಂ. 419, ಸಮ್ಮೇಳನ ಸಭಾಂಗಣ, ವಿಕಾಸಸೌಧ, ಬೆಂಗಳೂರು ಇಲ್ಲಿ ನಡೆಯಲಿರುವ ಕನ್ನಡ ಜಾಗೃತಿ ಸಮಿತಿ ಸದಸ್ಯರ ಒಂದು ದಿನದ ರಾಜ್ಯಮಟ್ಟದ ಕಮ್ಮಟದಲ್ಲಿ *ಭಾಗವಹಿಸಬಾರದೆಂದು* ತಾವು ಎಲ್ಲ ಜಾಗೃತಿ ಸದಸ್ಯರಿಗೆ ತಿಳಿಸುವಂತೆ ತಮ್ಮನ್ನು ಕೋರಲು ಮಾನ್ಯ ಅಧ್ಯಕ್ಷರಿಂದ ನಿರ್ದೇಶಿತಳಾಗಿದ್ದೇನೆ.
