ಧಾರವಾಡ: ಕಮಲಾಪುರದ ಸ್ಮಶಾನ ಮಾರಾಟಕ್ಕೀಟ್ಟ ಮಾಲೀಕ “ಕೈನವರಿಂದ” ಸಂಚಕಾರ- ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಸ್ಥಳೀಯರು….!!!
ಧಾರವಾಡ: ಯಾದವಾಡ ರಸ್ತೆಯಲ್ಲಿನ ರುದ್ರಭೂಮಿಯನ್ನ ಮಾರಾಟ ಮಾಡಲು ಮುಂದಾಗಿರುವ ಪ್ರಕರಣ ಸ್ಥಳೀಯರನ್ನ ರೊಚ್ಚಿಗೆಬ್ಬಿಸಿದ್ದು, ಭೂಮಿಯ ಮಾಲೀಕನ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ವೀಡಿಯೋ…
ಇಂದು ರುದ್ರಭೂಮಿ ಸ್ಥಳದಲ್ಲಿ ಜಮಾಯಿಸಿದ ಕಮಲಾಪುರ, ಮಾಳಾಪುರ, ಹರಿಜನಕೇರಿ, ಅನಾಡಗದ್ದಿ, ಮರಾಠ ಕಾಲನಿ ಸೇರಿದಂತೆ ವಿವಿಧ ಪ್ರದೇಶದ ಹಿರಿಯರು ಮಾಲೀಕರ ಮನಸ್ಥಿತಿಯ ಕುರಿತು ಆಕ್ರೋಶವ್ಯಕ್ತಪಡಿಸಿದರು.
ಮಲ್ಲಿಕಾರ್ಜುನಯ್ಯ ಹಿರೇಮಠ ಉರ್ಫ್ ರಪಾಟಿ ಎಂಬುವವರು 4ಎಕರೆ 15 ಗುಂಟೆ ಜಮೀನು ಮಾರಾಟ ಮಾಡಲು, ಅಲ್ಲಿ ಲೇ ಔಟ್ ಮಾಡಲು ಮುಂದಾಗಿರುವುದು ಸ್ಥಳೀಯರಿಗೆ ನೋವನ್ನುಂಟು ಮಾಡಿದೆ.
