ಧಾರವಾಡದಲ್ಲಿ ಪೊಲೀಸ್ ಕಮೀಷನರ್ N.ಶಶಿಕುಮಾರ್ “ಗಾಂಧಿಗಿರಿ”… Exclusive Videos

ಧಾರವಾಡ: ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಗಾಂಧಿ ಜಯಂತಿಯ ಮುನ್ನಾದಿನ ಗಾಂಧಿಗಿರಿ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ ಘಟನೆ ನಗರದಲ್ಲಿ ನಡೆದಿದೆ.
ಇತ್ತೀಚೆಗೆ ಬಡ್ಡಿ ಹಣದ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರನ್ನ ಭೇಟಿ ಮಾಡಿದ ನಂತರ ಸ್ಥಳೀಯ ಜನರಿಗೆ ಜೀವನದ ಪಾಠ ಮಾಡಿದರು.
ವೀಡಿಯೋ…
ಜೂಜಾಟವಾಡುವ ಮೂಲಕ ಬದುಕನ್ನ ದುರ್ಭರ ಮಾಡಿಕೊಳ್ಳಬೇಡಿ. ಆತ್ಮಹತ್ಯೆಯ ಬಗ್ಗೆ ವಿಚಾರವನ್ನೆ ಮಾಡಬಾರದು. ಯಾವುದೇ ಸಮಸ್ಯೆಯಿದ್ದರೂ ಸಮಾಜದ ಮುಖಂಡರ ಬಳಿ ಅಥವಾ ಪೊಲೀಸರ ಜೊತೆ ಹೇಳಿ ಎಂದರು.