ಧಾರವಾಡದಲ್ಲೊಂದು “ಕರುಣಾಜನಕ” ಘಟನೆ ಮತ್ತೂ ಪೊಲೀಸ್ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ….

ದಿನಪೂರ್ತಿ ಬಂದು ರಾತ್ರಿ ಬೆಳಗಾಗುವುದರೊಳಗೆ ಹಾರಿ ಹೋಗಿತ್ತು ಪ್ರಾಣ ಪಕ್ಷಿ
ಕುಟುಂಬದವರನ್ನ ಕರೆಸಲು ಕಾರಣವಾಯಿತು ಮಾನವೀಯತೆ
ಧಾರವಾಡ: ದೂರದ ತಮಿಳುನಾಡಿನ ಚಾಲಕನೋರ್ವ ತನಗೆ ಒಪ್ಪಿಸಿದ ಕೆಲಸವನ್ನ ಚಾಚೂ ತಪ್ಪದೇ ಪಾಲಿಸಿ, ಅಲ್ಲಿಯೇ ಉಸಿರು ಚೆಲ್ಲಿದ ಘಟನೆ ಧಾರವಾಡದ ರಾಯಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ಈ ಪ್ರಕರಣದಲ್ಲಿ ಮಾನವೀಯತೆ ಮೆರೆದಿದ್ದಾರೆ.
ತಮಿಳುನಾಡಿನ ರಾಜೇಂದ್ರಚೋಜಾನ್ ಕಲಿಯಾಪೆರುಮಾಳ ಎಂಬ ಚಾಲಕ, ತಾನು ತಂದಿದ್ದ ಗೂಡ್ಸ್ ವಾಹನದಲ್ಲಿ ಮಲಗಿದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದಾನೆ.
ರಾಯಾಪುರದ ಕೃಷ್ಣ ವೇರ್ ಹೌಸ್‌ಗೆ ವಾಷಿಂಗ್ ಮಷೀನ್ ಬಿಡಿ ಭಾಗಗಳನ್ನ ತಂದಿದ್ದ ರಾಜೇಂದ್ರ, ಅಲ್ಲಿಯೇ ಊಟ ಮಾಡಿ ಮಲಗಿ, ಉಸಿರು ಚೆಲ್ಲಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ದೌಡಾಯಿಸಿದ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರು ಕಾನೂನು ಕ್ರಮ ಜರುಗಿಸುವ ಜೊತೆಗೆ ಮಾನವೀಯತೆ ಮೆರೆದಿದ್ದಾರೆ. ಕುಟುಂಬದವರನ್ನ ಪತ್ತೆ ಹಚ್ಚಿ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಅಲ್ಲಿಗೆ ಹೋಗುವ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದಾರೆ.
ಧಾರವಾಡ ಪೊಲೀಸ್ ಇನ್ಸಪೆಕ್ಟರ್ ಕಾರ್ಯದ ಬಗ್ಗೆ ಮೃತ ರಾಜೇಂದ್ರನ ಸಂಬಂಧಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.