ಧಾರವಾಡ: “ನೀರಿನ ಬಳಿ ಆ್ಯಸಿಡ್‌ಯಿಟ್ಟ ಸಿಬ್ಬಂದಿ”- ನೀರೆಂದು ಅದನ್ನೇ ಕುಡಿದ ‘ವಿದ್ಯಾರ್ಥಿ’- ಸಮಾಜ ಕಲ್ಯಾಣ ಇಲಾಖೆ ಹಾಸ್ಟೇಲ್ ಆವಾಂತರ…!!!

ಧಾರವಾಡ: ಔಷಧ ತೆಗೆದುಕೊಳ್ಳುವ ಸಮಯದಲ್ಲಿ ನೀರೆಂದು ಆ್ಯಸಿಡ್ ಕುಡಿದ ವಿದ್ಯಾರ್ಥಿಯೋರ್ವ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕಿಮ್ಸನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ಧಾರವಾಡದ ಗಾಂಧಿನಗರದಲ್ಲಿನ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದ್ದು, ಅಂಜುಮನ್ ಕಾಲೇಜಿನಲ್ಲಿ ಬಿಎ ವಿಧ್ಯಾಭ್ಯಾಸ ಮಾಡುತ್ತಿರುವ ಕುಬೇರ ಲಮಾಣಿ ತೀವ್ರ ಅನಾರೋಗ್ಯಕ್ಕೀಡಾಗಿದ್ದಾನೆ.
ಜೂನ್ 30ರಂದೇ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಕುಡಿಯುವ ನೀರಿನ ಪಕ್ಕದಲ್ಲಿ ಆ್ಯಸಿಡ್ ಇಟ್ಟವರ ಬಗ್ಗೆ ಯಾವುದೇ ಕ್ರಮವನ್ನ ಇಲ್ಲಿಯವರೆಗೆ ತೆಗೆದುಕೊಂಡಿಲ್ಲ.
ಈ ಕುರಿತು ಕರ್ನಾಟಕವಾಯ್ಸ್ ವಿದ್ಯಾರ್ಥಿಯ ಪಾಲಕರು ಹಾಗೂ ವಸತಿ ನಿಲಯದ ವಾರ್ಡನ್ ಜೊತೆ ಮಾಹಿತಿ ಪಡೆದುಕೊಂಡಿದೆ. ವಿದ್ಯಾರ್ಥಿಗೆ ಆಹಾರವನ್ನ ನಳಿಕೆಯ ಮೂಲಕ ಕೊಡಲಾಗುತ್ತಿದ್ದು, ಗಂಟಲಿನ ಆಪ್‌ರೇಷನ್ ಮಾಡಲಾಗಿದೆ.
ಕುಬೇರ ಲಮಾಣಿ ಮೂಲತಃ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಬಳಿಯಿರುವ ನಡುವಿನ ತಾಂಡಾದ ನಿವಾಸಿಯಾಗಿದ್ದು, ಕುಬೇರ ಒಬ್ಬನೇ ಮಗನಾಗಿದ್ದಾನೆ. ಓದಲು ಬಂದವನ ಈ ಸ್ಥಿತಿಗೆ ಕಾರಣವಾದವರ ಮೇಲೆ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಅಚ್ಚರಿಯ ವಿಷಯವಾಗಿದೆ.