ಧಾರವಾಡದ “ಆ ಆಸ್ಪತ್ರೆ” ಎದುರೇ ಛಿದ್ರವಾದ ತಲೆ, ದುರ್ಮರಣ…!

ಧಾರವಾಡ: ವೇಗವಾಗಿ ಬಂದ ಅಪರಿಚಿತ ವಾಹನವೊಂದು ಮಧ್ಯವಯಸ್ಕ ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಹುಬ್ಬಳ್ಳಿ ರಸ್ತೆಯ ಎಸ್‌ಡಿಎಂ ಆಸ್ಪತ್ರೆಯ ಮುಂಭಾಗ ಸಂಭವಿಸಿದೆ.
ಸುಮಾರು 40 ರಿಂದ 45 ವಯಸ್ಸಿನ ವ್ಯಕ್ತಿಯ ತಲೆಯ ಮೇಲೆ ವಾಹನ ಹಾಯ್ದ ಪರಿಣಾಮ, ರಸ್ತೆಯುದ್ದಕ್ಕೂ ತಲೆಯ ಭಾಗ ಛಿದ್ರವಾಗಿ ಬಿದ್ದಿದೆ.
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ದೌಡಾಯಿಸಿರುವ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.