ಧಾರವಾಡ “ಸಂತೆ”ಯಲ್ಲೇ ಹಾರಿ ಹೋದ ಹೊಸಯಲ್ಲಾಪುರ ನಿವಾಸಿಯ ಪ್ರಾಣಪಕ್ಷಿ…

ಧಾರವಾಡ: ನಗರದ ಮಾರುಕಟ್ಟೆಯಲ್ಲಿ ವ್ಯಕ್ತಿಯೋರ್ವ ಸಾವಿಗೀಡಾಗಿರುವ ಘಟನೆ ನಡೆದಿದ್ದು, ಶವವನ್ನ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಹೊಸಯಲ್ಲಾಪುರದ ನಿವಾಸಿಯಾಗಿರುವ ಈರಪ್ಪ ಎಂಬ 40 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದು, ವಿಪರೀತ ಕುಡಿದಿದ್ದರಿಂದ ಹೀಗೆ ಆಗಿರಬಹುದೆಂದು ಶಂಕಿಸಲಾಗಿದೆ.
ಬೆಳಿಗ್ಗೆಯಿಂದಲೂ ಸಂತೆ ನಡೆಯುವ ಜಾಗದಲ್ಲಿ ಬಿದ್ದಿದ್ದರೂ, ಆತನ ಬಗ್ಗೆ ಯಾರೂ ವಿಚಾರಿಸಿಯೇ ಇರಲಿಲ್ಲ. ಆದರೆ, ಮಧ್ಯಾಹ್ನದ ವೇಳೆಗೆ, ಸಾವು ಆಗಿದೆ ಎಂದು ಗೊತ್ತಾಗಿದೆ.
ಶಹರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.