Posts Slider

Karnataka Voice

Latest Kannada News

ಮಹಿಳಾ ಅಧಿಕಾರಿ ಮನೆಯಲ್ಲಿ “ಹೋಂ ಗಾರ್ಡ್ ಅಡುಗೆ”- ಡ್ಯೂಟಿ ತೋರ್ಸೋದು ಒಂದ್ ಕಡೆ.. ಇರೋದ್ ಒಂದ್ ಕಡೆ…!

1 min read
Spread the love

ಧಾರವಾಡ: ಹಲವು ರೀತಿಯ ಅನುಮಾನಗಳಿಗೆ ಕಾರಣವಾಗುವಂತಹ ನಡುವಳಿಕೆಯನ್ನ ರೂಢಿಸಿಕೊಂಡಿರುವ ಮಹಿಳಾ ಅಧಿಕಾರಿಯ ಮನೆಯಲ್ಲಿ ಹೋಂ ಗಾರ್ಡ್ ಒಬ್ಬರು ಖಾಯಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಹೇಳಲಾಗಿದೆ.

ತಮ್ಮ ಪತಿಯನ್ನ ಅಖಾಡಾಕ್ಕೆ ಬಿಟ್ಟು ಡ್ಯೂಟಿ ಮಾಡಿಸಿಕೊಂಡ ಪ್ರಕರಣಗಳು ಹೊರಗೆ ಬರುತ್ತಿದ್ದ ಹಾಗೇ, ಮಹಿಳಾ ಅಧಿಕಾರಿಯ ವಿಧ ವಿಧದ ಕುಚೇಷ್ಟೇಗಳು ಹೊರಗೆ ಬೀಳತೊಡಗಿವೆ.

ಮಹಿಳಾ ಹೋಂ ಗಾರ್ಡವೊಬ್ಬರನ್ನ ಕಳೆದ ಎರಡ್ಮೂರು ತಿಂಗಳಿನಿಂದ ತಮ್ಮ ಮನೆಗೆ ಅಡುಗೆ ಮಾಡಿಸಿಕೊಳ್ಳಲು ಇಟ್ಟುಕೊಂಡಿದ್ದಾರೆಂದು ಹೇಳಲಾಗುತ್ತಿದ್ದು, ಬೆಳಿಗ್ಗೆ 8ರಿಂದ 11, ಸಂಜೆ 4ರಿಂದ 7ರ ವರೆಗೆ ಮನೆಯಲ್ಲಿಯೇ ‘ಚಾ-ಪಾನಿ’ ಮಾಡಿಕೊಂಡಿರಬೇಕಾದ ಸ್ಥಿತಿಯಿದೆಯಂತೆ.

ಅಸಲಿಗೆ ಹೋಂ ಗಾರ್ಡ್ ನ ಮಹಿಳೆಯ ಡ್ಯೂಟಿಯನ್ನ ನೇಮಕ ಮಾಡಿದ ಸ್ಥಳವೇ ಬೇರೆಯಿರತ್ತೆ. ಆದರೆ, ತೋರಿಸಿದ ಜಾಗದಲ್ಲಿ ಹೋಂ ಗಾರ್ಡ್ ಕಾಣದೇ ಇರುವುದು ಮಹಿಳಾ ಅಧಿಕಾರಿಯ ‘ಕರ್ತವ್ಯ’ವನ್ನ ತೋರಿಸುತ್ತಿದೆ.

ಮಹಿಳಾ ಅಧಿಕಾರಿಯ ಪತಿ ಮಹಾಶಯ, ಅಧಿಕಾರಿಯ ಕಚೇರಿಯಲ್ಲಿ ಕೂತು ಬಿಲ್ವಿಧ್ಯ ತೋರಿಸುವುದನ್ನ ಸಧ್ಯ ಕಡಿಮೆ ಮಾಡಿದ್ದು, ಖುಷಿಯ ವಿಚಾರವೇ ಆದರೂ, ದಕ್ಷತೆಯ ಮುಖವಾಡ ಎಲ್ಲರಿಗೂ ಗೊತ್ತಾಗಬೇಕಿದೆ ಎನ್ನೋದು ನ್ಯಾಯವಂತರ ಆಸೆಯಾಗಿದೆ.


Spread the love

Leave a Reply

Your email address will not be published. Required fields are marked *

You may have missed