ಧಾರವಾಡ ಹೋಳಿ- ಮೂರು ದಿಕ್ಕಲ್ಲಿ “ಡಿಂಕ್ ಚಕ್…ಡಿಂಕ್ ಚಕ್ಕ್”- ಹೊಡೀರಿ ಹಲಗಿ…!!!

ಧಾರವಾಡ: ವಿದ್ಯಾಕಾಶಿಯಲ್ಲಿ ಬೆಳಗಿನ ಜಾವದಿಂದಲೇ ಸಂಭ್ರಮದ ಹೋಳಿ ಆರಂಭವಾಗಿದ್ದು, ಜಾತಿ-ಭೇದ ಮತ್ತೂ ವಯಸ್ಸು ಮೀರಿ ಸಡಗರದಲ್ಲಿ ಮುಳುಗಿರುವ ದೃಶ್ಯಾವಳಿಗಳು ನಗರದ ಹಲವೆಡೆ ಕಾಣತೊಡಗಿದೆ.
ಹೋಳಿ ಸಂಭ್ರಮವನ್ನ ಇಮ್ಮಡಿಸಲು ಧಾರವಾಡ -71 ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರ ಅಭಿಮಾನಿಗಳು ಶಿವಾಜಿ ವೃತ್ತದ ಬಳಿ ರೇನ್ ಡಾನ್ಸ್, ಗಡಿಗೆ ಒಡೆಯುವ ಸ್ಪರ್ಧೆ ಹಮ್ಮಿಕೊಂಡಿದ್ದಾರೆ. ಧಾರವಾಡದ ಎಸ್‌ಬಿಐ ವೃತ್ತದ ಬಳಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರ ಅಭಿಮಾನಿಗಳು ಗಡಿಗೆ ಒಡೆಯುವ ಸ್ಪರ್ಧೆಯ ಜೊತೆಗೆ ಮಳೆ ಡಾನ್ಸ್ ಹಮ್ಮಿಕೊಂಡಿದ್ದಾರೆ.
ಸುಭಾಸ ರಸ್ತೆಯಲ್ಲಿ ಮಂಜುನಾಥ ಮಕ್ಕಳಗೇರಿ ಅವರ ಬಳಗ ರೇನ್ ಡಾನ್ಸ್ ಹಮ್ಮಿಕೊಂಡಿದೆ. ಎಲ್ಲ ಕಡೆಯೂ ಸಖತ್ ವ್ಯವಸ್ಥೆ ಮಾಡಿರುವುದು ಬಿಸಿಲಿನ ಧಗೆಯನ್ನ ಮರೆಸುವ ಹೋಳಿ ಇಂದಿನದಾಗಲಿದೆ.
ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆ ಇಂದು ನಡೆಯುತ್ತಿದ್ದು ಎಲ್ಲರೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕಿದೆ. ಪೊಲೀಸರು ನಗರದಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಿಕೊಂಡಿದ್ದು, ಸಾರ್ವಜನಿಕರ ಸಹಕಾರ ನಿರೀಕ್ಷೆ ಮಾಡುತ್ತಿದ್ದಾರೆ.