ಧಾರವಾಡದಲ್ಲಿ “ಹಿಟ್ ಆ್ಯಂಡ್ ರನ್” ಸ್ಥಳದಲ್ಲೇ ಉಸಿರುಬಿಟ್ಟ ಬೈಕ್ ಸವಾರ….

ಧಾರವಾಡ: ದ್ವಿಚಕ್ರವಾಹನಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಸವಾರ ಸ್ಥಳದಲ್ಲಿ ಸಾವಿಗೀಡಾದ ದುರ್ಘಟನೆ ಧಾರವಾಡದ ಹೊಯ್ಸಳನಗರದಲ್ಲಿ ಸಂಭವಿಸಿದೆ.
ಕ್ಷಣ ಮಾತ್ರದಲ್ಲಿ ಪರಾರಿಯಾಗಿರುವ ವಾಹನದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಅಪಘಾತದಲ್ಲಿ ಮರಣ ಹೊಂದಿರುವ ವ್ಯಕ್ತಿಯ ತಪಾಸಣೆ ಮಾಡುತ್ತಿದ್ದು, ಆತನ ವಿವರವನ್ನ ಪೊಲೀಸರು ಕಲೆ ಹಾಕುತ್ತಿದ್ದಾರೆ.
ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಶವವನ್ನ ಆಸ್ಪತ್ರೆಗೆ ರವಾನೆ ಮಾಡಿದ್ದು, ಪರಾರಿಯಾಗಿರುವ ವಾಹನದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.