ಪೊಲೀಸ್ ಕಮೀಷನರ್ ಲಾಬುರಾಮ್ ಅವರೇ, ನಿನ್ನೆ ಧಾರವಾಡದಲ್ಲಿ ಹೇಗೆ ಯುವಕರನ್ನ ಹೊಡೆದಿದ್ದಾರೆ ಗೊತ್ತಾ…!

ಧಾರವಾಡ: ಲಾಕ್ ಡೌನ್ ವೇಳೆಯಲ್ಲಿ ಯಾರೊಬ್ಬರ ಮೇಲೆ ಹೊಡೆಯುವುದನ್ನ ಮಾಡಲೇಬಾರದೆಂದು ಹಿರಿಯ ಅಧಿಕಾರಿಗಳ ಹೇಳಿದ ನಂತರವೂ, ನಿನ್ನೆ ಕ್ರಿಕೆಟ್ ಆಡುತ್ತಿದ್ದವರ ಮೇಲೆ ಪೊಲೀಸರು ಅದ್ಯಾವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂಬುದನ್ನ ಎಲ್ಲರೂ ನೋಡಲೇಬೇಕು.
ಧಾರವಾಡದ ಮುರುಘಾಮಠ ಬಳಿಯಲ್ಲಿ ಲಾಕ್ ಡೌನ್ ವೇಳೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರ ಗುಂಪಿನ ಮೇಲೆ ದಾಳಿ ಮಾಡಿರುವ ಪೊಲೀಸರು, ಅವರನ್ನ ಮನಬಂದಂತೆ ಥಳಿಸಿದ್ದಾರೆ. ಆ ವೀಡಿಯೋಯೀಗ ವೈರಲ್ ಆಗಿದೆ. ಕಳೆದ ಬಾರಿ ಲಾಕ್ ಡೌನ್ ವೇಳೆಯಲ್ಲಿ ಎಸಿಪಿ ಜೆ.ಅನುಷಾ ಅವರು ಪೊಲೀಸರಿಗೆ ನೀಡಿದ ಸೂಚನೆಯೂ ಮತ್ತೂ ನಿನ್ನೆ ನಡೆದ ಪೊಲೀಸ್ ಗಿರಿಯ ಎರಡು ವೀಡಿಯೋಗಳು ಇಲ್ಲಿವೆ ನೋಡಿ.
ಧಾರವಾಡದ ಉಪನಗರ ಠಾಣೆಯ ಪೊಲೀಸರು ಇಷ್ಟೊಂದು ಕ್ರೂರವಾಗಿ ಯಾಕೆ ನಡೆದುಕೊಂಡರು ಎಂಬುದನ್ನ ಹಿರಿಯ ಅಧಿಕಾರಿಗಳೇ ವಿಚಾರಿಸಬೇಕಿದೆ. ಸೋಷಿಯಲ್ ಡಿಸ್ಟನ್ಸ್ ಬಗ್ಗೆ ಮಾತನಾಡುತ್ತಲೇ, ಎಲ್ಲರನ್ನ ಒಂದೇ ವಾಹನದಲ್ಲಿ ಹಾಕಿಕೊಂಡು ಬಂದಿದ್ದು, ನ್ಯಾಯವೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಸಂಬಂಧಿಸಿದವರು ಉತ್ತರಿಸಬೇಕಿದೆ.