ಧಾರವಾಡದಲ್ಲಿ ಹಾಡುಹಗಲೇ ಸಿನೇಮಾ ಸ್ಟೈಲ್ ನಲ್ಲಿ ಅಟ್ಯಾಕ್…!
1 min readಧಾರವಾಡ: ಪ್ರಜ್ಞಾವಂತರ ಸ್ಥಳವೆಂದು ಒಂದು ಕಾಲದಲ್ಲಿ ಕರೆಸಿಕೊಳ್ಳುತ್ತಿದ್ದ ಧಾರವಾಡದಲ್ಲಿ ಗೂಂಡಾಗಿರಿಗೆ ಕಡಿವಾಣ ಬೀಳದೇ ಇರುವುದರಿಂದಲೇ ಹಾಡುಹಗಲೇ ಹಲ್ಲೆಗಳು ನಡೆಯುತ್ತಿದ್ದು, ಇಂದು ಕೂಡಾ ಸಿನೇಮಾ ಮಾದರಿಯಲ್ಲಿ ಅಟ್ಯಾಕ್ ಮಾಡಲಾಗಿದೆ.
ಆಟೋದಲ್ಲಿ ಬಂದ ಹಲವರು ಗುತ್ತಿಗೆದಾರನಿಗೆ ಬಡಿಗೆಯಿಂದ ಮನ ಬಂದಂತೆ ಬಡಿದು ಪರಾರಿಯಾಗಿದ್ದು, ಗಾಯಾಳು ತೀವ್ರವಾದ ನೋವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಧಾರವಾಡದ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರನಾಗಿರುವ ಅಜೀಜ ಮಾಲಿ ಎನ್ನುವರ ಮೇಲೆ ಪಾಲಿಕೆಯಲ್ಲೇ ಅಟ್ಯಾಕ್ ಮಾಡಿ ಪರಾರಿಯಾಗಿದ್ದಾರೆ. ಬಾಸುಂಡೆ ಬರುವಂತೆ ಹೊಡೆದ ಪರಿಣಾಮ, ದೇಹದಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಕೈ ಕೂಡಾ ಮುರಿದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದ ಉಪನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರಂತೆ.