ಧಾರವಾಡ: ಮಹಿಳೆಗೆ ಆತ ಹೊಡೆದ್ನಾ… ಮಹಿಳೆ ಈತನಿಗೆ ಹೊಡೆದ್ಲಾ… ಇಬ್ಬರದ್ದು ಕೇಸ್ ಪಡೆದ ಪೊಲೀಸರು….!

ಧಾರವಾಡ: ವಿದ್ಯಾನಗರಿಯಲ್ಲಿ ಹಾಡುಹಗಲೇ ಬಡಿಗೆಯನ್ನ ಹಿಡಿದುಕೊಂಡು ಗ್ಯಾಸ್ ಏಜೆನ್ಸಿಯಲ್ಲಿದ್ದ ಮಹಿಳೆಯನ್ನ ಬಡಿದ ಘಟನೆಯೊಂದು ಹೊರ ಬಿದ್ದ ನಂತರ, ಹಲವು ಅಚ್ಚರಿಗಳು ಕಂಡು ಬಂದಿದ್ದವು. ಅದಕ್ಕೀಗ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ.
ಮೊದಲು ಈ ವೀಡಿಯೋವನ್ನ ನೋಡಿಬಿಡಿ.
ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಕೆಯ ಹೆಸರು ರತ್ನಾ ನರಗುಂದ. ಇವರು ಕೆಲಸ ಮಾಡುವ ಏಜೆನ್ಸಿಗೆ ನುಗ್ಗಿ ಭರತ ಹೂಗಾರ ಹೊಡೆದನೆಂದು ದೂರನ್ನ ನೀಡಲಾಗಿತ್ತು. ಆದರೆ, ಆ ದೂರನ್ನ ಪ್ರಕರಣವನ್ನಾಗಿ ಮಾರ್ಪಡಿಸಲು ಪೊಲೀಸರು ಕೆಲಕಾಲ ಮೀನಮೇಷ ಎಣಿಸಿದ್ದರು.
ಸೋಜಿಗ ಅಂದರೇ, ಇದೀಗ ಭರತೇಶ್ವರ ಹೂಗಾರ, ರತ್ನಾ ನರಗುಂದ ಮೇಲೆ ದೂರು ನೀಡಿದ್ದು, ರತ್ನಾರೇ ತಮ್ಮನ್ನ ಬಡಿದಿದ್ದಾರೆಂದು ಹೇಳಿಕೊಂಡಿದ್ದಾರೆ.

ಉಪನಗರ ಠಾಣೆ ಪೊಲೀಸರು ರತ್ನಾ ನರಗುಂದ ಹಾಗೂ ಭರತೇಶ್ವರ ಹೂಗಾರ ಕೊಟ್ಟ ದೂರುಗಳನ್ನ ಪಡೆದು, ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.
ಈ ಘಟನೆಗೆ ಹಲವು ಮುಖಗಳಿದ್ದು, ಯಾವುದೇ ಮುಲಾಜಿಗೆ ಪೊಲೀಸರು ಬೀಳದೇ ತನಿಖೆಯನ್ನ ನಡೆಸಬೇಕಾಗಿದೆ.