ಧಾರವಾಡದಲ್ಲಿ ಚಿಕ್ಕಪ್ಪನಿಗೆ ತಲ್ವಾರ ಹಾಕಿದವನ ಬಂಧಿಸಿದ ಪೊಲೀಸರು…!

ಧಾರವಾಡ: ನಗರದ ಸೈದಾಪುರದ ಡುಮ್ಮಗೇರಿ ಓಣಿಯಲ್ಲಿ ಚಿಕ್ಕಪ್ಪನಿಗೆ ತಲ್ವಾರನಿಂದ ಹೊಡೆದ ಪ್ರಕರಣದಲ್ಲಿ ಆರೋಪಿಯನ್ನ ಕೆಲವೇ ಗಂಟೆಗಳಲ್ಲಿ ಬಂಧನ ಮಾಡುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಸ್ತಿ ವಿಷಯಕ್ಕಾಗಿ ಸ್ವಂತ ಚಿಕ್ಕಪ್ಪ ಯಾಕೂಬ ಶಿವಳ್ಳಿ ಎಂಬುವವರನ್ನ ತಲ್ವಾರನಿಂದ ಹೊಡೆದಿದ್ದ ವಾಸೀಂ ಶಿವಳ್ಳಿ ಎಂಬುವವನ್ನ ಪೊಲೀಸರು ಬಂಧನ ಮಾಡಿ, ವಿಚಾರಣೆ ನಡೆಸುತ್ತಿದ್ದಾರೆ.

ಕೆಲವು ದಿನಗಳಿಂದಲೂ ಆಸ್ತಿಯ ವಿಷಯವಾಗಿ ಜಗಳ ತೆಗೆಯುತ್ತಿದ್ದ ವಾಸೀಂಗೆ ಪ್ರದೇಶದ ಹಿರಿಯರು ಕೂಡಾ ಸಾಕಷ್ಟು ಬಾರಿ ತಿಳುವಳಿಕೆ ನೀಡಿದ್ದರು. ಆದರೆ, ಅದನ್ನ ಮೀರಿ ಚಿಕ್ಕಪ್ಪನನ್ನ ಕೊಲೆ ಮಾಡುವ ಉದ್ದೇಶದಿಂದ ತಲ್ವಾರನಿಂದ ಹಲ್ಲೆ ಮಾಡಿದ್ದಾನೆ.
ಪ್ರಕರಣ ದಾಖಲು ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಬಂಧನ ಮಾಡಿರುವ ಪೊಲೀಸರು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.