ಧಾರವಾಡ ಟೋಲ್‌ನಾಕಾ ಬಳಿ “ಬಾಬಾಜಾನ್ ಸಂಶಿ” ಅಂದರ್- 680 ಗ್ರಾಂ ಕಿಕ್ಕೇರಿಸೋ ಗಾಂಜಾ ವಶ…!!!

ಧಾರವಾಡ: ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿ, ಆತನ ಬಳಿಯಿದ್ದ ಸಾವಿರಾರೂ ಮೌಲ್ಯದ ಗಾಂಜಾವನ್ನ ಟೋಲ್‌ನಾಕಾ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನ ಬಾಬಾಜಾನ ಸಂಶಿ ಎಂದು ಗುರುತಿಸಲಾಗಿದ್ದು, ಆತನ ಬಳಿಯಿದ್ದ 680 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆದುಕೊಂಡು ತನಿಖೆಯನ್ನ ಮುಂದುವರೆಸಿದ್ದಾರೆ.
ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಜೊತೆಗಿನ ಸಂಪರ್ಕದ ಬಗ್ಗೆ ಮತ್ತಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.