ಕೊಚ್ಚಿಕೊಂಡೋದ ಧಾರವಾಡದ ಗಾಂಧಿನಗರ ರಸ್ತೆ: ಪೊಲೀಸರಿಲ್ಲದಿದ್ದರೇ…!
1 min readಧಾರವಾಡ: ನಗರಕ್ಕೆ ನೀರು ಪೂರೈಕೆ ಮಾಡುವ ಪ್ರಮುಖ ಪೈಪೊಂದು ಒಡೆದ ಪರಿಣಾಮವಾಗಿ ಧಾರವಾಡ ಗಾಂಧಿನಗರದ ಪ್ರಮುಖ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಸಂಚಾರಿ ಠಾಣೆ ಪೊಲೀಸರು ಇಲ್ಲದಿದ್ದರೇ ದೊಡ್ಡದೊಂದು ಅವಘಡವೇ ಸಂಭವಿಸುತ್ತಿತ್ತು.
ಕಳೆದ ರಾತ್ರಿ ಒಂದೂವರೆ ಸುಮಾರಿಗೆ ಮುಖ್ಯ ಪೈಪ್ ಒಡೆದು ನೀರೆಲ್ಲ ರಸ್ತೆಗೆ ಬಂದು ಗಾಂಧಿನಗರದ ಬಳಿ ಚಿಕ್ಕದೊಂದು ಕೆರೆಯ ನಿರ್ಮಾಣವಾಗಿತ್ತು. ರಭಸವಾಗಿ ನೀರು ಹರಿಯುತ್ತಿದ್ದರಿಂದ ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸದ ಸ್ಥಿತಿ ನಿರ್ಮಾಣವಾಗಿತ್ತು.
ಇದೇ ಕಾರಣದಿಂದ ಸಂಚಾರಿ ಠಾಣೆಯ ಪೊಲೀಸರು, ಸಂಚಾರಿ ಠಾಣೆಯ ಇನ್ಸೆಪೆಕ್ಟರ್ ಮಲ್ಲನಗೌಡ ನಾಯ್ಕರ ಅವರ ಮೂಲಕ ಮೊದಲು ಜಲಮಂಡಳಿಗೆ ತಿಳಿಸಿ, ನೀರನ್ನ ಬಂದ್ ಮಾಡಿಸೋ ಪ್ರಯತ್ನ ಮಾಡಿದ್ರು. ಆ ರಸ್ತೆಯಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೂ ಬೇರೆ ಮಾರ್ಗದಲ್ಲಿ ಸಂಚರಿಸುವ ವ್ಯವಸ್ಥೆ ಮಾಡಿದ್ರು.
ನೀರು ನಿಂತು ಯಾವುದೇ ತೊಂದರೆಯಾಗಲಿಕ್ಕಿಲ್ಲ ಎಂದಾಗ ಪೊಲೀಸರು ಅಲ್ಲಿಂದ ಹೊರಟು ನಿಂತರು. ಆಗ ಸಮಯ ಬರೋಬ್ಬರಿ ಬೆಳಗಿನ ಜಾವ ನಾಲ್ಕು ಗಂಟೆ. ಆ ಸಮಯದಲ್ಲೂ ಇನ್ಸಪೆಕ್ಟರ್ ನಾಯ್ಕರ ಎಲ್ಲ ಮಾಹಿತಿಯನ್ನೂ ಪಡೆಯುತ್ತಿದ್ದರು. ಸ್ಥಳದಲ್ಲಿದ್ದ ಎಎಸ್ಐ ಮೇದಾರ, ಮಹಾಂತೇಶ ಶೇಖಸನದಿ, ಮಲ್ಲೇಶಿ ಲಮಾಣಿ ಹಾಗೂ ಬಸು ಲಮಾಣಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಣೆ ಮಾಡಿದ್ರು.
ಗಾಂಧಿನಗರದ ರಸ್ತೆಯೂ ಪೂರ್ಣವಾಗಿ ಹದಗೆಟ್ಟಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಯಾವುದೇ ಅವಘಡ ಸಂಭವಿಸದಂತಾಗಿದೆ. ಎಲ್ಲ ಸಮಯದಲ್ಲೂ ಜನರ ನೆಮ್ಮದಿಯನ್ನ ಕಾಯುವ ಪೊಲೀಸರಿಗೆ ಜನತೆ ಹ್ಯಾಟ್ಸಾಫ್ ಹೇಳಿದರು.