ಡಿಸಿ ಸಾಹೇಬ್ರೇ, ರೈತ ಕೇಂದ್ರದಲ್ಲಿ ಏನು ನಡೆಯುತ್ತಿದೆ ನೋಡಿ…!
1 min readಹುಬ್ಬಳ್ಳಿ: ಕೊರೋನಾ ಸಮಯದಲ್ಲೂ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಹೆಚ್ಚುವರಿ ರೈತ ಕೇಂದ್ರಗಳನ್ನ ತೆರೆದು ಬೀಜವನ್ನ ವಿತರಣೆ ಮಾಡಲಾಗುತ್ತಿದೆ. ಆದರೆ, ಕೇಂದ್ರದಲ್ಲಿ ನಡೆಯುತ್ತಿರುವುದೇನು ಎಂಬುದನ್ನ ನೋಡಬೇಕಿದೆ.
ರೈತ ಸಂಪರ್ಕ ಕೇಂದ್ರದಲ್ಲಿ ಸುಖಾಸುಮ್ಮನೆ ರೈತರಿಗೆ ತೊಂದರೆ ಕೊಡುವ ಮತ್ತೂ ಪದೇ ಪದೇ ಅಲೆದಾಡಿಸುವ ಯೋಚನೆಯನ್ನ ಹೊಂದಿದ ಹಾಗೇ ವರ್ತನೆ ಮಾಡುತ್ತಿದ್ದಾರೆ. ಕಳೆದ ವರ್ಷದವರಿಗೆ ಈ ವರ್ಷ ಕೊಡುವುದಿಲ್ಲವೆಂದು ಹೇಳುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಅಮರಗೋಳದ ರೈತರೋರ್ವರು ಮಾತನಾಡಿದ್ದಾರೆ ಕೇಳಿ.
ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಅಧಿಕಾರಿಗಳ ಉದ್ದೇಶವನ್ನ ತಿಳಿದುಕೊಳ್ಳಬೇಕಿದೆ. ಇಲ್ಲದಿದ್ದರೇ, ನೂರೆಂಟು ಸಮಸ್ಯೆಯ ನಡುವೆ ರೈತ ಕೇಂದ್ರಕ್ಕೆ ಬರುವ ರೈತರ ಗೋಳು ನಿಲ್ಲುವುದಿಲ್ಲ.