ಧಾರವಾಡ 0148/2025 ಕೇಸ್ “ಅರಣ್ಯರೋಧನ”- ವಾಸನೆಯದ್ದೆ ಕಾರುಬಾರಂತೆ…!!!

ಧಾರವಾಡ: ಕಳೆದ 30ರಂದು ನಡೆದ ಜೂಜಾಟದ ಪ್ರಕರಣವೊಂದು ಸಖತ್ತಾಗಿ ಸದ್ದು ಮಾಡುತ್ತಿದ್ದು, ಹಲವರ ಹೆಸರುಗಳು ಇನ್ನೇನು ಬಹಿರಂಗಗೊಳ್ಳಲಿವೆ ಎಂಬ ಮಾಹಿತಿ ಹೊರ ಬಂದಿದೆ.
ಗಣೇಶನ ಹಬ್ಬದ ನೆಪದಲ್ಲಿ ನಡೆದಿದ್ದ ಅಂದರ್-ಬಾಹರ್ ಪ್ರಕರಣವನ್ನ ಪತ್ತೆ ಹಚ್ಚಿದ್ದ ಉಪನಗರ ಠಾಣೆಯ ಪೊಲೀಸರು, ಆರೋಪಿಗಳ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ.
ವಾಸನೆ ಬೀರುತ್ತಿರುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಅಧಿಕಾರಿಗಳ ಮಾನ ಕಾಪಾಡುವ ಯತ್ನವನ್ನ ಸದ್ದಿಲ್ಲದೇ ನಡೆಯುತ್ತಿದೆ ಎಂದು ಹೇಳಲಾಗಿದೆ. ಆದರೆ, ದಕ್ಷ ಅಧಿಕಾರಿಯಾಗಿರುವ ದಯಾನಂದ ಶೇಗುಣಸಿ ಅವರು, ಪ್ರತಿಯೊಬ್ಬರನ್ನೂ ಎಳೆ ತಂದು ಕಾನೂನು ಪಾಠ ಮಾಡಲಿದ್ದಾರೆ.
ವಾಸನೆ ಬೀರುತ್ತಿರುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಏನೂ ಗೊತ್ತೆಯಿಲ್ಲವೇನೋ ಎಂಬಂತೆ ವರ್ತನೆ ಮಾಡುತ್ತಿದ್ದು, ಈ ಹಿಂದೆ ಇಲ್ಲಿಂದ ಹೋಗಿದ್ದ ಅಧಿಕಾರಿ ಪ್ರಮುಖ ಆರೋಪಿ ಎನ್ನಲಾಗಿದೆ.