ಧಾರವಾಡದ “ಟೈವಾಕ್” ಬಳಿ ಫೈರಿಂಗ್- ಪೊಲೀಸ್ ವಶಕ್ಕೆ…

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಬಳಿಯ ಟೈವಾಕ್ ಬಳಿ ಪೈರಿಂಗ್ ನಡೆದಿದ್ದು, ಇಬ್ಬರನ್ನ ವಶಕ್ಕೆ ಪಡೆದಿರುವ ವಿದ್ಯಾಗಿರಿ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಶುಶಾಂತ ಅಗರವಾಲ್ ಜೊತೆಗೆ ಮತ್ತೋರ್ವನನ್ನ ವಿದ್ಯಾಗಿರಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಲೈಸನ್ಸ್ ಹೊಂದಿರುವ ರಿವಾಲ್ವರನಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ.
ಆಸ್ತಿಯ ವಿಷಯವಾಗಿ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗುವ ಹಂತದಲ್ಲಿದ್ದಾಗ ಫೈರಿಂಗ್ ನಡೆದಿದೆ. ಈ ಬಗ್ಗೆ ವಿಚಾರಣೆ ಮುಂದುವರೆದಿದ್ದು, ಕೆಲವೇ ಸಮಯದಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ.