ಎಮ್ಮಿಕೇರಿಯಲ್ಲಿ “ಧಾರವಾಡ ಚಾಯ್ & ಪಡ್ಸ್ ಸೆಂಟರ್”ಗೆ ಬೆಂಕಿ…
ಧಾರವಾಡ: ಬೆಳ್ಳಂಬೆಳಿಗ್ಗೆ ಧಾರವಾಡ ಚಾಯ್ ಮತ್ತು ಪಡ್ಸ್ ಸೆಂಟರ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಎಮ್ಮಿಕೇರಿಯಲ್ಲಿ ನಡೆದಿದೆ.
ಬೆಂಕಿ ತಗುಲಿದ್ದನ್ನ ನೋಡಿದ ವಾಯು ವಿಹಾರಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದು, ಕೆಲವೇ ಸಮಯದಲ್ಲಿ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಮಯಕ್ಕೆ ಸರಿಯಾಗಿ ಬಂದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸ್ವಲ್ಪ ಹೊತ್ತು ಕಳೆದಿದ್ದರೂ ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ವ್ಯಾಪಿಸುತ್ತಿತ್ತು.
