ಧಾರವಾಡ ಜಿಲ್ಲೆಯಲ್ಲಿ “ಬಹುದೊಡ್ಡ ಸಂಸ್ಥೆ”ಯನ್ನೇ ಆರೋಪಿ ಮಾಡಿಸಿದ್ರಾ ಸಕಲಕಲಾವಲ್ಲಭ ‘ಜನಸೇವಕ’…!?

ಧಾರವಾಡ: ತನ್ನ ಗೆಲುವಿಗೆ ಬೇಕಾದ ಸಮಯದಲ್ಲಿ ತನಗೆ ಬೇಕಾದ ರೀತಿಯಲ್ಲಿ ದುರ್ಬಳಕೆ ಮಾಡಿಕೊಂಡು ಈಗ ಅದೇ ಪ್ರಮುಖ ಸಮಾಜದ ಸಂಸ್ಥೆಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವ ಪ್ರಕರಣವೊಂದು ನಡೆದಿದೆ.
ಹೌದು… ಇಡೀ ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಂಸ್ಥೆಯ ಅಧ್ಯಕ್ಷ ಹಾಗೂ ಎಲ್ಲ ಪದಾಧಿಕಾರಿಗಳು ಇದೀಗ ಆರೋಪಿಗಳಾಗಿದ್ದಾರೆ. ತಾವೂ ಮಾಡದ ಮತ್ತೂ ಊಹಿಸಲು ಆಗದ ಪ್ರಕರಣವೊಂದರಲ್ಲಿ.
ಈ ಪ್ರಕರಣ ಅದ್ಭುತ ಸಿನೇಮಾವೊಂದರ Script ಥರ ಹೆಣೆಯಲಾಗಿದೆ. ಎಲ್ಲವನ್ನೂ ತಾವೇ ಮಾಡಿ, ತಿಂದು ತೇಗಿದ ನಂತರ ಬಗ್ಗಿಯೂ ನೋಡದವನನ್ನ ಆರೋಪಿ ಮಾಡಿರುವುದು ಹಾಸ್ಯಾಸ್ಪದವಾಗಿದೆ.
ಕಥೆ ಹೆಣೆಯುವಾಗ ಮತ ಪಡೆದ ಋಣವನ್ನ ಜನಸೇವಕ ಮರೆತಿದ್ದಾನೆ ಎಂಬುದೀಗ ಗೊತ್ತಾಗತೊಡಗಿದೆ. ರಾಜಕೀಯ ಇಷ್ಟೊಂದು ಕೆಳಮಟ್ಟಕ್ಕೆ ಧಾರವಾಡ ಜಿಲ್ಲೆಯಲ್ಲಿ ಹೋಗಿರುವುದು ಈ ಘಟನೆ ಸಾಕ್ಷ್ಯಕರಿಸಲಿದೆ.
ಈ ಪ್ರಕರಣದ ಪ್ರತಿಯೊಂದು ದಾಖಲೆಗಳು ಕರ್ನಾಟಕವಾಯ್ಸ್.ಕಾಂಗೆ ಲಭಿಸಿದ್ದು, ಎಳೆ ಎಳೆಯಾಗಿ ವಿವರವನ್ನ ನೀಡಲಿದೆ.