ಧಾರವಾಡ ಗ್ರಾಮೀಣ “ಧಣಿ”ಯ ಪಾದಯಾತ್ರೆ ಆರಂಭ- ಸಾಥ್ ನೀಡಿದ ಜನಸಾಗರ…!!!
ಧಾರವಾಡ: ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಅಮೃತ ದೇಸಾಯಿ ಅವರು ಇಂದಿನಿಂದ ಉಳವಿ ಪಾದಯಾತ್ರೆ ಆರಂಭಿಸಿದ್ದು, ಸಾವಿರಾರೂ ಸಂಖ್ಯೆಯಲ್ಲಿ ಅಭಿಮಾನಿಗಳು ಸಾಥ್ ನೀಡಿದರು.
ಹುಟ್ಟೂರು ಹಂಗರಕಿಯಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಅಮೃತ ದೇಸಾಯಿಯವರ ಧರ್ಮಪತ್ನಿಯೂ ಭಾಗವಹಿಸಿದ್ದು, ಜನರು ಓಂ ನಮಃ ಶಿವಾಯದ ಮೂಲಕ ಪಾದಯಾತ್ರೆಯಲ್ಲಿ ಭಾಗವಹಿಸಿದರು.
ವೀಡಿಯೋ…
ಗರಗದ ಶ್ರೀ ಮಡಿವಾಳೇಶ್ವರ ಗದ್ದುಗೆಯ ಆಶೀರ್ವಾದ ಪಡೆದ ಅಮೃತ ದೇಸಾಯಿಯವರಿಗೆ ಹಲವು ಮಠದ ಶ್ರೀಗಳು, ಶುಭ ಕೋರಿದರು. ಕೆಎಂಎಫ್ ಅಧ್ಯಕ್ಷ ಶಂಕರ ಮುಗದ ಸೇರಿದಂತೆ ಹಲವರು ಭಾಗವಹಿಸಿದ್ದರು.