ಧಾರವಾಡ: “10-16” ವರ್ಷದಿಂದ ಕಮೀಷನರ್ ಕಚೇರಿಯಲ್ಲಿ “ಜಾಂಡಾ” ಊರಿದವರ ಮೊದಲ ಲಿಸ್ಟ್….

ಕಮೀಷನರ್ ಕಚೇರಿಯಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಇರುವವರ ಲಿಸ್ಟ್
ಧಾರವಾಡ: ಒಂದೇ ಕಚೇರಿಯಲ್ಲಿ 7 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಬೇರೆ ಜಿಲ್ಲೆಗೆ ವರ್ಗಾಯಿಸಲು ಕ್ರಮ ಕೈಗೊಳ್ಳಬೇಕೆಂದು ಸಭಾಪತಿಯವರಾದ ಬಸವರಾಜ ಹೊರಟ್ಟಿಯವರು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಧಾರವಾಡ ಅಪರ ಆಯುಕ್ತರಿಗೆ ಪತ್ರ ಬರೆದು 10 ದಿನಗಳು ಕಳೆದರೂ ಇಲ್ಲಿಯವರಗೆ ಕಾರ್ಯಪ್ರವೃತ್ತಿಯಾಗದ ಇಲಾಖೆಯ ಜಿಡ್ಡುಗಟ್ಟಿದ ವ್ಯವಸ್ಥೆ ಬಗ್ಗೆ ಶಿಕ್ಷಣ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಭಾಪತಿಯವರ ಪತ್ರಕ್ಕೂ ಪ್ರತಿಕ್ರೆಯೆ ಇಲ್ಲದಿದ್ದರೆ ಇನೂ ಸಾಮಾನ್ಯ ನಾಗರಿಕರ ಮನವಿಗೆ ಯಾವ ರೀತಿ ಸ್ಪಂದನೆ ನಿಗಬಹುದು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಕಳವಳ ಮೂಡಿದೆ ಎನ್ನಲಾಗುತ್ತಿದೆ.
ಕರ್ನಾಟಕವಾಯ್ಸ್.ಕಾಂ ನಿನ್ನೆ ಅಪರ ಆಯುಕ್ತರ ಕಚೇರಿಯಲ್ಲಿ 10 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಚೇರಿಯಲ್ಲಿ ‘ಗೂಟ ಬಡಿದುಕೊಂಡು’ ಠಿಕಾಣೆ ಹೂಡಿದ ನೌಕರರ ವಿವರ ಬಹಿರಂಗ ಗೊಳಿಸುವುದಾಗಿ ಘೋಷಿಸಿದರ ಹಿನ್ನಲೆಯಲ್ಲಿ ಸದ್ಯ ಇಲ್ಲಿ ನೌಕರರ ವಿವರ ಪ್ರಕಟಿಸಲಾಗುತ್ತಿದ್ದು, ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಸಭಾಪತಿಯವರ ಪತ್ರಕ್ಕೆ ಕ್ರಮಕೈಗೊಳ್ಳುವರೆ ಎಂಬ ನಿರೀಕ್ಷೆಯೊಂದಿಗೆ ಶಿಕ್ಷಣಾಸಕ್ತರು ಕಾಯುತ್ತಿದ್ದಾರೆ.