ಧಾರವಾಡ: DDPI ಕಚೇರಿಯಲ್ಲಿ “ಜಾಂಡಾ” ಊರಿರುವರ ಲಿಸ್ಟ್… ಓರ್ವರಂತೂ 33 ವರ್ಷದಿಂದ ಇಲ್ಲೇ ಠಿಕಾಣಿ…👁

ಡಿಡಿಪಿಐ ಕಚೇರಿಯಲ್ಲಿ ದಶಕಗಳಿಂದ ಇರುವವರ ಲಿಸ್ಟ್
ಹುಬ್ಬಳ್ಳಿ: ಏಳು ವರ್ಷಕ್ಕಿಂತ ಹೆಚ್ಚಿಗೆ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ನೌಕರರ ಕಡ್ಡಾಯ ವರ್ಗಾವಣೆ ಕುರಿತು ಸಭಾಪತಿ ಬಸವರಾಜ ಹೊರಟ್ಟಿಯವರು ಬರೆದ ಪತ್ರದ ಹಿನ್ನಲೆ, ಧಾರವಾಡ ಶಿಕ್ಷಣ ಇಲಾಖೆ ಅಪರ ಆಯುಕ್ತಾಲಯ ಕಚೇರಿವೊಂದರಲ್ಲೇ 10 ವರ್ಷಕ್ಕಿಂತಲೂ ಹೆಚ್ಚಿಗೆ ‘ಗೂಟ ಬಡೆದುಕೊಂಡು’ ಠಿಕಾಣೆ ಹೂಡಿದ ನೌಕರರ ಅಧಿಕೃತ ಪಟ್ಟಿಯನ್ನು ಕರ್ನಾಟಕವಾಯ್ಸ್.ಕಾಂ ಕಳೆದ ವಾರ ಪ್ರಕಟಿಸಿದರೂ ಕೂಡಾ ಇಲ್ಲಿಯವರೆಗೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗುತ್ತಿದೆ.
ಅಪರ ಆಯುಕ್ತಾಲಯದಲ್ಲಿ ಕೆಲವರಂತೂ ಅತೀ ಪ್ರಭಾವಶಾಲಿಗಳಾಗಿದ್ದು ಅವರನ್ನು ಯಾರೂ ‘ಅಳಗಾಡಿಸಲಾಗುವುದಿಲ್ಲ’ ಎನ್ನಲಾಗುತ್ತಿದ್ದು, ಆ ಭ್ರಷ್ಟರ ಕೈಚಳಕ ಹೇಗಿದೆ ಎಂದರೆ ಕೆಲ ಪ್ರಾಮಾಣಿಕ ಅಧಿಕಾರಿಗಳು ಅವರೊಂದಿಗೆ ‘ಹೊಂದಾಣಿಕೆ’ಯಾಗದಿದ್ದರೆ ಅವರನ್ನು ತಕ್ಷಣವೇ ಬೇರೆಡೆಗೆ ವರ್ಗಾಯಿಸುತ್ತಾರೆ ಇಲ್ಲವೇ ಅವರನ್ನು ಬೇರೆ ಜಿಲ್ಲೆಗೆ ನಿಯೋಜನೆ ಮೇಲೆ ‘ಓಡಿಸುತ್ತಾರೆ’ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.
ಹಾಗೇ ಕೆಲ ನೌಕರರಿಗೆ ಅಪರ ಆಯುಕ್ತಾಲಯದಲ್ಲೇ ಬಡ್ತಿ ನೀಡಿ ಅವರಿಗೆ ಎಲ್ಲ ರೀತಿಯ ‘ಸಹಾಯ-ಸಹಕಾರ’ಗಳನ್ನು ಸ್ವಂತ ಅಧಿಕಾರಿಗಳೆ ನೀಡುತ್ತಾರೆ. ಆದರೆ ‘ನಮ್ಮಂಥ ಸಾಮಾನ್ಯರಿಗೆ ಬಡ್ತಿ ನೀಡುವ ಸಂದರ್ಭ ಬಂದಾಗ ಅಪರ ಆಯುಕ್ತಾಯಲದಲ್ಲಿ ಖಾಲಿ ಹುದ್ದೆ ಇದ್ದಾಗಲೂ ಕೂಡಾ ನಮಗೆ ಬೇರೆ ಜಿಲ್ಲೆಗೆ ಬಡ್ತಿ ಪಡೆಯುವಂತೆ ಅಧಿಕಾರಿಗಳೇ ಒತ್ತಾಯಿಸುತ್ತಾರೆ’ ಎಂದು ಬಡ್ತಿಯಿಂದ ವಂಚಿತನಾದ ನೌಕರರರೊಬ್ಬರು ಕರ್ನಾಟಕವಾಯ್ಸ್.ಕಾಂ ಗೆ ತಮ್ಮ ಅಳಲು ತೊಡಿಕೊಂಡಿದ್ದಾರೆ.
ಸದ್ಯ ಶಿಕ್ಷಣ ಇಲಾಖೆ ಒಂದೇ ಕಚೇರಿಯಲ್ಲಿ 7 ವರ್ಷಕ್ಕಿಂತಲೂ ಹೆಚ್ಚಿಗೆ ಸೇವೆ ಸಲ್ಲಿಸುತ್ತಿರುವ ನೌಕಕರ ವಿವರ ಬಹಿರಂಗಗೊಳಿಸುವುದಾಗಿ ಕರ್ನಾಟಕವಾಯ್ಸ್.ಕಾಂ ಹೇಳಿತ್ತು. ಈ ಹಿನ್ನಲ್ಲೆ ಇಂದು ಧಾರವಾಡ ಉಪನಿರ್ದೇಶಕರ ಕಚೇರಿಯಲ್ಲಿ 10 ವರ್ಷಕ್ಕಿಂತಲೂ ಹೆಚ್ಚಿಗೆ ‘ಗೂಟ ಬಡೆದುಕೊಂಡು’ ಠಿಕಾಣೆ ಹೂಡಿದವರ ವಿವರ ಪ್ರಕಟಿಸುತ್ತಿದೆ. ಓರ್ವ ಸಿಬ್ಬಂದಿಯಂತೂ ಕಳೆದ 33 ವರ್ಷದಿಂದ ಇದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಬಹಿರಂಗವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈಗಲಾದರೂ ಸಭಾಪತಿಯವರ ಪತ್ರಕ್ಕೆ ಮಾನ್ಯತೆ ನೀಡುತ್ತಾರಾ ಎಂದು ಕಾದು ನೋಡಬೇಕಾಗಿದೆ.