ಧಾರವಾಡ: ಕೊನೆಗೂ ನವಲೂರ ಶಾಲೆಯಲ್ಲಿ “ಶೀಟಿ” ಹಿಡಿಯಲಿರುವ ಮಾಸ್ತರ್… ಆದೇಶ ಪತ್ರದಲ್ಲಿ ಡಿಡಿಪಿಐ “ಕೈ ಚಳಕ”…

ಧಾರವಾಡ: ಕರ್ನಾಟಕವಾಯ್ಸ್.ಕಾಂ ನಿರಂತರವಾಗಿ ಹೊರ ಹಾಕಿದ್ದ ಮಾಹಿತಿಗೆ ಧಾರವಾಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಣಿದಿದ್ದು, ಬರೋಬ್ಬರಿ ದಶಕದಿಂದ ಶಾಲೆಯಿಂದ ದೂರವುಳಿದಿದ್ದ ಶಿಕ್ಷಕ ಶಾಲೆಗೆ ಹೋಗುವುದು ನಿಶ್ಚಿತವಾಗಿದೆ.
ನವಲೂರ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಶಶಿಕಾಂತ ಬಸಾಪುರ ಅವರು ಪ್ರತಿವರ್ಷ ಡೆಪ್ಟೇಷನ್ ಪಡೆಯುತ್ತಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕ ಹುದ್ದೆಯನ್ನ ಇಟಿಗಟ್ಟಿ ಶಾಲೆಯ ದೈಹಿಕ ಶಿಕ್ಷಕ ಮಾಳಿಯವರಿಗೆ ಸೇವಾ ಹಿರಿತನದ ಮೇಲೆ ನೀಡಲಾಗಿದೆ. ಈ ಮೂಲಕ ಕರ್ನಾಟಕವಾಯ್ಸ್.ಕಾಂ ಮಾಹಿತಿಗೆ ಜಯ ಸಿಕ್ಕಿದೆ.
ಈ ಆದೇಶವನ್ನ ಮಾಡುವ ಸಮಯದಲ್ಲಿ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು “ಮೂರು ತಿಂಗಳ ಅವಧಿ” ಎಂದು ಬರೆಸಿರುವುದು ಸೋಜಿಗ ಮತ್ತೂ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ, ಈ ಹಿಂದಿನ ಡೆಪ್ಟೇಷನ್ ಆದೇಶದಲ್ಲಿ “ಮೂರು ತಿಂಗಳ” ಇಲ್ಲದಿರುವುದು ಕಂಡು ಬಂದಿದೆ. ಈ ಮೂಲಕ ಡಿಡಿಪಿಐ ಅವರಿಗೂ ಹೊಸ ಆದೇಶ ಅನಿವಾರ್ಯ ಎಂಬುದು ಸಾಬೀತಾಗಿದೆ.
ಡಿಡಿಪಿಐ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಶಿಕಾಂತ ಬಸಾಪುರ ಅವರು ನವಲೂರ ಶಾಲೆಗೆ ಎಷ್ಡು ಗಂಟೆಗೆ ಹೋಗ್ತಾರೆ. ಎಷ್ಟು ಗಂಟೆಗೆ ಹೊರಗೆ ಬರ್ತಾರೆ ಎಂಬ ಮಾಹಿತಿಯನ್ನ ಎಸ್‌ಡಿಎಂಸಿ ಕಲೆ ಹಾಕಲು ಮುಂದಾಗಿದ್ದು, ಸೇವಾ ಹಿರಿತನದ ಮೇಲೆ ಸಿಕ್ಕಿರುವ ಪರಿವೀಕ್ಷಕರ ಹುದ್ದೆಗೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ಈಗ ಮಾಳಿ ಎಂಬ ಶಿಕ್ಷಕರ ಮೇಲಿದೆ.