ಧಾರವಾಡ: ಎದ್ದು ಬಿದ್ದು, ಹಿತ್ತಲಿಂದ ಹಿತ್ತಲಿಗೆ ಜಿಗಿದು ತಪ್ಪಿಸಿಕೊಂಡ ಡಿವೈಎಸ್ಪಿ… Exclusive ಅಂದ್ರೇ ಇದು…!!!

ನಾಲ್ವರು ಅಧಿಕಾರಿಗಳನ್ನೂ ತಪ್ಪಿಸಲು ಹರಸಾಹಸ
ಊರಲ್ಲಿನ ಜನರೇ ಗಾಬರಿಯಾಗುವಂತೆ ನಡೆದುಕೊಂಡ
ಧಾರವಾಡ: ತಾನೂ ಮಾಡಿದ ಅತಿರೇಕದ ಕೆಲಸದಿಂದ ಕೈಕೊಳ ಹಾಕಿಸಿಕೊಳ್ಳುವ ಸ್ಥಿತಿಗೆ ಬಂದಿರುವ ಡಿವೈಎಸ್ಪಿ ಕೇಡರ್ ಅಧಿಕಾರಿಯೋರ್ವ ತಾನು ಹುಟ್ಟಿದ ಊರಿನಲ್ಲಿ, ಬಂದ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಜಿಗಿದಾಡಿದ್ದನ್ನ ನೋಡಿ ಗ್ರಾಮಸ್ಥರು ಗೇಲಿ ಮಾಡುವಂತಾಗಿದೆ.
ಪ್ರಮುಖರ ಕೈಕಾಲು ಹಿಡಿದುಕೊಂಡು ಪೋಸ್ಟಿಂಗ್ ಪಡೆದಿದ್ದ ಮಹಾನ್ ಅಧಿಕಾರಿ, ತಾನು ಮಾಡಿದ ಘನಂಧಾರಿ ಕೆಲಸದಿಂದ ಜೈಲು ಪಾಲಾಗುವ ಭಯದಿಂದ ತನ್ನೂರಿಗೆ ಬಂದಿದ್ದ. ಅಲ್ಲಿಯೂ ಮಾಹಿತಿ ಆಧರಿಸಿ ಅಧಿಕಾರಿಗಳು ಬಂದಾಗ, ಹಿತ್ತಲಿಂದ ಹಿತ್ತಲಿಗೆ ಜಿಗಿದು ತಪ್ಪಿಸಿಕೊಂಡಿದ್ದಾರೆ.
ಗ್ರಾಮದಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳು ಹಿಡಿಯುವ ಕಾರ್ಯಾಚರಣೆ ಮುಂದುವರೆಸಿದ್ದು, ಅಧಿಕಾರಿ ಮಾತ್ರ ಯಾರದ್ದೋ ಮನೆಯೊಳಗೋ, ಹಿತ್ತಲಿನೊಳಗೋ, ಬಣವೆ ಸಂಧಿಯಲ್ಲೋ ಕೂತು ಮರೆಮಾಚುತ್ತಿದ್ದಾರಂತೆ.
ಈ ಕಾರ್ಯಾಚರಣೆ ನಡೆಯುತ್ತಿರುವುದು ಎಲ್ಲಿ… ತಪ್ಪಿಸಿಕೊಂಡ ಅಧಿಕಾರಿ ಯಾರೂ… ಯಾವ ಜಿಲ್ಲೆಯಿಂದ ಧಾರವಾಡ ಜಿಲ್ಲೆಯ ಯಾವ ಗ್ರಾಮಕ್ಕೆ ಬಂದಿದ್ದಾರೆ… ಪ್ರಕರಣ ಏನು… ಎಷ್ಟು ಗಂಟೆಯಿಂದ ಕಣ್ಣಾಮುಚ್ಚಾಲೆ ನಡೆಯುತ್ತಿದೆ… ಈ ಎಲ್ಲ ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ 12 ಗಂಟೆಗೆ ಬಹಿರಂಗ ಮಾಡತ್ತೆ…