ಧಾರವಾಡ: ಎದ್ದು ಬಿದ್ದು “ಕಾರು ಬಿಟ್ಟು” ಹೋದ “DYSP” ಇವರೇ ನೋಡಿ….

ಊರಲ್ಲಿ ಹುಡುಕಾಟ ಆರಂಭಿಸಿದಾಗ ಮನೆಯಿಂದ ಎಸ್ಕೇಪ್
ಪೋಸ್ಟಿಂಗ್ ಪಡೆಯುವಾಗ ಪಡೆದ ಉಪಕಾರ ಮರೆತ್ತಿದ್ದವರಿಗೆ ತಕ್ಕ ಶಾಸ್ತಿ
ಧಾರವಾಡ: ಲೋಕಾಯುಕ್ತ ಪೊಲೀಸರು ದಾವಣಗೆರೆಯಲ್ಲಿ ದಾಳಿ ನಡೆಸಿದ ಸಮಯದಲ್ಲಿ ಕಾಣದ ಅಧಿಕಾರಿಯನ್ನ ಹುಬ್ಬಳ್ಳಿಯ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಹಿಡಿಯಲು ಬಂದವರಿಗೆ ಕೊನೆಗೂ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆಂದು ಹೇಳಲಾಗಿದೆ.
ಅಬಕಾರಿ ಇಲಾಖೆಯಲ್ಲಿ ಡಿವೈಎಸ್ಪಿ ಆಗಿರುವ ಮೂಲತಃ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಅವರಾಗಿರುವ ರವಿ ಮರಿಗೌಡರ ಎಂಬ ಅಧಿಕಾರಿಯೇ, ಲೋಕಾಯುಕ್ತ ಪೊಲೀಸರಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆಂಬುದು ಗ್ರಾಮದಲ್ಲಿ ರಹಸ್ಯವಾಗಿ ಉಳಿದಿಲ್ಲ.
ದಾವಣಗೆರೆಯಲ್ಲಿ ಸಿಎಲ್-7ಗೆ ಪರವಾನಿಗೆ ಕೊಡಲು ಹಣ ಕೇಳಿದ್ದರಿಂದ ಅಲ್ಲಿ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಅಬಕಾರಿ ಇಲಾಖೆಯ ಸ್ವಪ್ನ ಅವರು ಈ ಹಿಂದೆ ಧಾರವಾಡದಲ್ಲಿ ಕಾರ್ಯ ನಿರ್ವಹಿಸಿದ್ದರು. ಮರಿಗೌಡರ ಕೂಡಾ ಧಾರವಾಡದಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಅಬಕಾರಿ ಇಲಾಖೆಯ ರವಿ ಮರಿಗೌಡರ ತಾವು ತಂದಿದ್ದ ಕಾರನ್ಮ ಊರಲ್ಲೇ ಬಿಟ್ಟು, ಬೈಕಿನಲ್ಲಿ ಹೋಗಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ. ಇವರನ್ನ ಹಿಡಿಯಲು ಬಂದಿದ್ದ ಲೋಕಾಯುಕ್ತ ಪೊಲೀಸರು, ಖಾಲಿ ಕೈಯಲ್ಲಿ ಮರಳಿದ್ದಾರಂತೆ.