ಧಾರವಾಡ: ರಸ್ತೆಯಲ್ಲಿ ಚಾಲಕರ “ರಕ್ತ ಕಣ್ಣೀರು”- ಕಣ್ಣು ತೆರೆಯೋ ದೊರೆ…
1 min readಧಾರವಾಡ: ಕಳೆದ ಹದಿನೆಂಟು ಗಂಟೆಗಳ ಕಾಲದಿಂದ ನಡೆಯುತ್ತಿರುವ ಗ್ಯಾಸ್ ಲೀಕ್ ಕಾರ್ಯಾಚರಣೆಯ ವೇಳೆಯಲ್ಲಿ ನೂರಾರೂ ವಾಹನ ಚಾಲಕರು ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತದ ಬಗ್ಗೆ ತೀವ್ರ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ಚಾಲಕರ ನೋವಿನ ನುಡಿ…
ದೇಶದ ವಿವಿಧ ರಾಜ್ಯಗಳಿಂದ ಅತ್ತಿಂದಿತ್ತ ಸಂಚರಿಸುವ ವಾಹನ ಚಾಲಕರನ್ನ ಕೆಲವರು ಊಟ, ನೀರಿನ ರೂಪದಲ್ಲಿ ಸುಲಿಯುತ್ತಿದ್ದಾರೆ. ಎರಡು ರೊಟ್ಟಿ, ನೀರು ಮತ್ತು ಚಾ ಗೆ 250 ರೂಪಾಯಿ ಪಡೆಯಲಾಗುತ್ತಿದೆ ಎಂದು ದೂರುತ್ತಿದ್ದಾರೆ.
ಧಾರವಾಡ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮವನ್ನ ಜರುಗಿಸದೇ ಇರುವುದು ಸೋಜಿಗ ಮೂಡಿಸುತ್ತಿದೆ. ಚಾಲಕರಿಗೆ ಸಹಾಯ ಮಾಡುವ ಜೊತೆಗೆ ಧಾರವಾಡದ ಗೌರವವನ್ನ ಉಳಿಸುವ ಜವಾಬ್ದಾರಿಯನ್ನ ನಿಭಾಯಿಸಬೇಕಿದೆ.