ಅಶ್ರಫಿ ಜೀಲಾನಿ ಹುಟ್ಟುಹಬ್ಬ: ಹಣ್ಣು-ಹಂಪಲ ವಿತರಣೆ

ಧಾರವಾಡ:ಸಂತ ಸಯ್ಯದ ಮಹಮ್ಮದ ಮದನಿ ಮಿಯಾ ಅಶ್ರಫಿ ಜೀಲಾನಿರವರ 85ನೇ ಹುಟ್ಟುಹಬ್ಬದ ನಿಮಿತ್ತ ಧಾರವಾಡದ ಮಹದೀಸ -ಎ-ಆಝಮ್ ಮಿಷನ್ ಎಜ್ಯುಕೇಶನ್ ಮತ್ತು ಸೋಷಿಯಲ್ ವೆಲ್‌ಫೇರ್ ಟ್ರಸ್ಟ್‌ನ ವತಿಯಿಂದ ಧಾರವಾಡ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲಗಳನ್ನು ವಿತರಣೆ ಮಾಡಲಾಯಿತು.
ಅಧ್ಯಕ್ಷ ರಸೂಲ ಧಾರವಾಡಕರ, ಉಪಾಧ್ಯಕ್ಷ ಶುಕುರ್‌ಅಹ್ಮದ.ಎ.ಸೂರಣಗಿ, ಅತಾವುಲ್ಲಾ ಮಕಾನದಾರ, ಸಲೀಂ ಕುಂಬಿ, ಶರಪು ಹಾಳಭಾವಿ, ಮೌಲಾನಾ ಮಹಮ್ಮದಉಮರ್ ಮಿಶ್ರಿಕೋಟಿ, ಯುವ ನಾಯಕ ಮುಫೀರ ಕರ್ಜಗಿ, ಮುಸ್ತಾಕ ಅಹ್ಮದ ನಾಲತವಾಡ, ದಾವೂದಖಾನ ಜಾಗೀರದಾರ, ಜಾಕೀರಅಹ್ಮದ ರೋಟಿವಾಲೆ, ಮಕ್ಬುಲ್ಅಹ್ಮದ ತಾಡಪತ್ರಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ರೋಗಿಗಳ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥನೆ ಸಲ್ಲಿಸಿದರು.