ಹುಚ್ಚರಲ್ಲದವರಿಗೆ ಹುಚ್ಚರ ಪಟ್ಟ: ಧಾರವಾಡ ಡಿಮಾನ್ಸ್ ವೈದ್ಯರು ಸೇರಿ ಹಲವರ ವಿರುದ್ಧ FIR …!

ಧಾರವಾಡ: ಕೆಲವು ದುಷ್ಟ ಶಕ್ತಿಗಳೊಂದಿಗೆ ನಗರದ ಮಾನಸಿಕ ಆಸ್ಪತ್ರೆಯಲ್ಲಿದ್ದ ಕೆಲವು ವೈಧ್ಯರು ಕೂಡಿಕೊಂಡು ಉತ್ತಮರನ್ನೇ ಹುಚ್ಚರು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಡಿಮಾನ್ಸ್ ಆಸ್ಪತ್ರೆಯ ವೈಧ್ಯರು ಸೇರಿದಂತೆ ಐವರ ಮೇಲೆ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯ ಗೋಕುಲ ರಸ್ತೆಯ ವೆಂಕಟೇಶ್ವರನಗರದ ವೆಂಕಟೇಶ ಕಾಲನಿಯ ನಿವಾಸಿಯಾಗಿರುವ ಆರ್.ಕಲೈಸೆಲ್ವಿ ಎಂಬುವವರು ದೂರು ನೀಡಿದ್ದು, ಆ ಪ್ರಕಾರ ತಮಿಳುನಾಡಿನ ಸುಂದರರಾಜನ ಆರ್, ಹುಬ್ಬಳ್ಳಿಯ ವಿಕ್ರಂ, ಡಿಮಾನ್ಸ್ ಆಸ್ಪತ್ರೆಯ ಮಹೇಶ ದೇಸಾಯಿ, ರಾಘವೇಂದ್ರ ನಾಯಕ, ರಂಗನಾಥ ಕುಲಕರ್ಣಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕಲೈಸೆಲ್ವಿ ಎಂಬುವವರ ಆಸ್ತಿಯನ್ನ ಹೊಡೆಯಬೇಕೆಂದು ಮೋಸದಿಂದ ವಂಚನೆ ಮಾಡುವ ಯತ್ನ ನಡೆದಿದೆ. ಮಾನಸಿಕವಾಗಿ ಚೆನ್ನಾಗಿದ್ದರೂ ಕೂಡಾ ಮನೋರೋಗಿ ಎಂದು ಬಿಂಬಿಸಲಾಗಿದೆ ಎಂದು ದೂರು ನೀಡಿದ ಮಹಿಳೆ ಹೇಳಿಕೊಂಡಿದ್ದಾಳೆ.

ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಧಾರವಾಡ ಉಪನಗರ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.