ಧಾರವಾಡ “ಕಂಠಿಗಲ್ಲಿ” ಚಾಕು ಇರಿದ ಪ್ರಕರಣ- ಗಾಯಾಳು ರಾಘವೇಂದ್ರ ಸಾವು…

ಹುಬ್ಬಳ್ಳಿ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಹಾವೇರಿಪೇಟೆ ಕಂಠಿಗಲ್ಲಿಯಲ್ಲಿ ನಡೆದಿದ್ದ ಚಾಕು ಇರಿತದ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ರಾಘವೇಂದ್ರ ಗಾಯಕವಾಡ ಎಂಬ ಯುವಕ ಸಾವಿಗೀಡಾದ ದುರ್ಧೈವಿಯಾಗಿದ್ದಾನೆ. ಈತ ಗೋವಾದಲ್ಲಿ ಲ್ಯಾಬ್ ಟೆಕ್ಷಿಷಿಯನ್ ಆಗಿ ಕೆಲಸ ಮಾಡುತ್ತಿದ್ದ.
ಖ್ವಾಜಾ ಶಿರಹಟ್ಟಿ ಎಂಬಾತ ರಾಘವೇಂದ್ರನ ಸಹೋದರ ಮಹಾಂತೇಶ ಎಂಬಾತನಿಗೆ ಸಾಲ ನೀಡಿದ್ದ. ಈ ವಿಷಯವಾಗಿ ಮನೆಗೆ ಬಂದಿದ್ದ ಆರೋಪಿ, ಮಹಾಂತೇಶ ಇಲ್ಲದೇ ಇದ್ದರೂ ಆತನ ಸಹೋದರ ರಾಘವೇಂದ್ರನ ಬೆನ್ನಿಗೆ ಐದಾರು ಬಾರಿ, ಇರಿದು ಚಾಕುವನ್ನ ಬೆನ್ನಿನಲ್ಲೇ ಬಿಟ್ಟು ಪರಾರಿಯಾಗಿದ್ದ.
ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿ, ವಿಚಾರಣೆಗೆ ಕರೆದುಕೊಂಡು ಹೋದಾಗ ಆರೋಪಿ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದ. ಈ ಸಮಯದಲ್ಲಿ ಆತನಿಗೆ ಗುಂಡೇಟು ಬಿದ್ದಿದೆ.