Posts Slider

Karnataka Voice

Latest Kannada News

ಶಿಕ್ಷಣ ಇಲಾಖೆಯನ್ನೇ “ಯಾಮಾರಿಸುತ್ತಿರುವ” ಧಾರವಾಡ ಡಿಡಿಪಿಐ….

1 min read
Spread the love

ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಜಿಲ್ಲೆಯ ಉಪನಿರ್ದೇಶಕರು ಇಲಾಖೆಯನ್ನೇ ಯಾಮಾರಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ತೀವ್ರ ಗೊಂದಲ ಉಂಟಾಗಿದೆ.

ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಓರ್ವ ಶಿಕ್ಷಕನಿಗಾಗಿ ಎಷ್ಟೇಲ್ಲ ಕಸರತ್ತು ಮಾಡಿ, ಇಲಾಖೆಯನ್ನ ಯಾಮಾರಿಸುತ್ತಿದ್ದಾರೆ ಎಂಬುದು ಕರ್ನಾಟಕವಾಯ್ಸ್.ಕಾಂಗೆ ದಾಖಲೆ ಸಮೇತ ಮಾಹಿತಿ ಲಭಿಸಿದೆ.

12.09.2023ಕ್ಕೆ ಹೊರಡಿಸಿರುವ ಆದೇಶ… ಬಿಇಓ ಕಚೇರಿಗೆ ತಲುಪಿಲ್ಲ

ಡಿಡಿಪಿಐ ಆಗಿರುವ ಕೆಳದಿಮಠ ಅವರು 12.09.2023ಕ್ಕೆ ಆದೇಶವೊಂದನ್ನ ಹೊರಡಿಸುತ್ತಾರೆ. ಆ ಆದೇಶದ ಪ್ರಕಾರ ನವಲೂರು ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಶಿಕಾಂತ ಬಸಾಪೂರ ಎಂಬುವವರನ್ನ ಡೆಪ್ಟೇಟೇಷನ್ ರದ್ದು ಮಾಡುತ್ತಾರೆ. ಆದರೆ, ಅದರಲ್ಲೊಂದು ವಾಕ್ಯ ಬರೆದು (ಈ ವರ್ಷದ ಸ್ಪೋರ್ಟ್ಸ್ ಮುಗಿದ ನಂತರ) ಆದೇಶ ಮಾಡುತ್ತಾರೆ. ಆ ಆದೇಶ ಧಾರವಾಡದ ಬಿಇಓ ಕಚೇರಿಗೆ ತಲುಪುವುದೇ ಇಲ್ಲ.

16.10.2023ಕ್ಕೆ ಡಿಡಿಪಿಐ ಹೊರಡಿಸಿರುವ ಆದೇಶ

ಇದಾದ ನಂತರ 16.10.2023ಕ್ಕೆ ಡಿಡಿಪಿಐ ಮತ್ತೊಂದು ಆದೇಶ ಹೊರಡಿಸುತ್ತಾರೆ. ಆ ಆದೇಶದಲ್ಲಿ ಧಾರವಾಡ ಶಹರದ ದೈಹಿಕ ಶಿಕ್ಷಣ ಪರಿವೀಕ್ಷಕರನ್ನ ಪ್ರಭಾರಿ ಮಾಡುವಾಗ ಸೇವಾ ಜೇಷ್ಠತೆ ಪರಿಗಣಿಸಿ ಎಂದು ಹೇಳುತ್ತಾರೆ. (ಸೇವಾ ಜೇಷ್ಠತೆಯ ಆಧಾರದಲ್ಲಿ ಶಶಿಕಾಂತ ಬಸಾಪೂರ ಈ ಪೋಸ್ಟಿಗೆ ಬರಲ್ಲ) ಈ ಆದೇಶವನ್ನ ಧಾರವಾಡ ಶಹರ ಬಿಇಓ ಕಚೇರಿಗೆ ಕಳಿಸುತ್ತಾರೆ.

25.10.2023ಕ್ಕೆ ಡಿಡಿಪಿಐ ಹೊರಡಿಸಿರುವ ಆದೇಶದ ಪ್ರತಿ

ಡಿಡಿಪಿಐ ಅವರು ಅದೇ ಶಶಿಕಾಂತ ಬಸಾಪೂರ ಅವರನ್ನ ಇಂದಿನಿಂದ ನಡೆಯುವ ಕ್ರೀಡಾಕೂಟದಲ್ಲಿ ಬಾಲಕರ ಎಸೆತದ ನಿರ್ಣಾಯಕರ ಮುಖ್ಯಸ್ಥ ಎಂದು 25.10.2023ಕ್ಕೆ ಮತ್ತೊಂದು ಆದೇಶ ಹೊರಡಿಸುತ್ತಾರೆ. ಈ ಆದೇಶ ತಕ್ಷಣವೇ ಬಿಇಓ ಅವರಿಗೆ ತಲುಪುತ್ತೆ.

ಡಿಡಿಪಿಐ ಕೆಳದಿಮಠ ಅವರು ತಾವೂ ಎಷ್ಟೊಂದು ಚಾಣಾಕ್ಷ ಎಂಬುದನ್ನ ಸಾಬೀತು ಪಡಿಸಲು, ಇದೇ ಶಿಕ್ಷಕ ಬಸಾಪೂರ ಇರುವ ನವಲೂರ ಶಾಲೆಗೆ ನೇಕಾರನಗರದ ಶಾಲೆಯ ಶಿಕ್ಷಕರನ್ನ ಡೆಪ್ಟೇಟೇಷನ್ ಮಾಡಿ, ನಂತರ ಅದನ್ನ ರದ್ದು ಮಾಡಿ, ತದನಂತರ ಅವರಿಗೆ ಶೋಕಾಸ್ ನೋಟೀಸ್ ಕೊಡ್ತಾರೆ. ಆದರೆ, ಬಸಾಪೂರ ವಿಷಯದಲ್ಲಿ ಅವರು ಮಾಡಿದ ಆದೇಶಗಳು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿವೆ.

ಕಂಡ ಕಂಡವರ ಬಳಿ ಬೇರೆಯದ್ದೆ ಕಥೆ ಹೇಳಿ, ತಾವೂ ಬಹಳ ಸಾಚಾ ಎಂದು ತೋರಿಸಿಕೊಳ್ಳುತ್ತಿರುವ ಡಿಡಿಪಿಐ ಎಸ್. ಎಸ್.ಕೆಳದಿಮಠ ಅವರು ಮಾಡುತ್ತಿರುವ ಇಲಾಖೆಯ ವಂಚನೆಗಳನ್ನ ಗಮನಿಸುವ ಇರಾದೆ ಸಂಬಂಧಿಸಿದ ಅಧಿಕಾರಿಗಳಿಗೆ ಇದೇಯಾ… ಶಿಕ್ಷಣ ಇಲಾಖೆಯ ಕಮೀಷನರ್ ಧಾರವಾಡದಲ್ಲಿಯೇ ಇದ್ದಾರಲ್ವಾ…


Spread the love

Leave a Reply

Your email address will not be published. Required fields are marked *

You may have missed