ಧಾರವಾಡ “ಖೊಟ್ಟಿ ದಾಖಲೆ” ದಶಕಗಳ ನಂತರ ಡಿಡಿಪಿಐ ಅಂಗಳದಲ್ಲಿ ಪೊಲೀಸರು…

ಧಾರವಾಡ: ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ದಶಕಗಳ ನಂತರ ಪೊಲೀಸರು ಬಂದು ನಿಲ್ಲುವಂತ ಸ್ಥಿತಿ ನಿರ್ಮಾಣವಾಗಿತ್ತು. ಇಂತಹದಕ್ಕೆ ಕಾರಣವಾಗಿದ್ದು, ಕಚೇರಿಯಿಂದ ನಡೆದ ನಕಲಿ- ಅಸಲಿ ಹೈಡ್ರಾಮಾ.
ಹೌದು… ಮೂರು ಗ್ರಾಮದ ಗ್ರಾಮಸ್ಥರು ತಮ್ಮೂರಿನಲ್ಲಿರುವ ಶಾಲೆಯ ನಕಲಿಯನ್ನ ದಾಖಲೆಗಳ ಸಮೇತ ಬಹಿರಂಗ ಮಾಡಲು ಡಿಡಿಪಿಐ ಕಚೇರಿ ಮುಂದೆ ಹೋರಾಟ ನಡೆಸಿದರು. ಈ ಸಮಯದಲ್ಲಿ ನಡೆದ ಅವ್ಯವಹಾರದ ಬಗ್ಗೆ ಮಾಹಿತಿ ನೀಡಿದರು. ಇದೇ ವಿಷಯದ ಕುರಿತು ಡಿಡಿಪಿಯವರನ್ನ ಕೇಳಿದರೇ, ಶಾಲೆಯ ಬಗ್ಗೆ ಬಿಇಓ ಅವರು ನೀಡಿರುವ ಮಾಹಿತಿಗೆ ಅನುಗುಣವಾಗಿ ನಾವು ಮುಂದುವರೆದಿದ್ದೇವೆ ಎಂದು ಹೇಳಿದರು.
ಯಾರೂ ಹೆಂಗೆ ಮಾತಾಡಿದ್ರು… ಹೋರಾಟ ಹೆಂಗಿತ್ತು… ಇಲ್ಲಿದೆ ಸಂಪೂರ್ಣ ವೀಡಿಯೋ…
ಹುಬ್ಬಳ್ಳಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅವರು, ಶಾಲೆಯಲ್ಲಿ ಮಕ್ಕಳಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆಂದು ಡಿಡಿಪಿಐ ಹೇಳಿದರು. ಆದರೆ, ಆ ಶಾಲೆಯಲ್ಲಿ ಎಂಟನೇ ವರ್ಗಕ್ಕೆ ಮಕ್ಕಳೇ ಇಲ್ಲದಿರುವುದನ್ನ ಗ್ರಾಮಸ್ಥರು ಖಚಿತಪಡಿಸಿದರು.