ಧಾರವಾಡ ಡಿಡಿಪಿಐ ಕಚೇರಿಯಲ್ಲಿ “ಬಾರಾ ಬಾನಗಡಿ”- ಸರಕಾರದ ಆದೇಶಗಳು ಕಸದ ಬುಟ್ಟಿಗೆ….

ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಉಪನಿರ್ದೇಶಕರ ಕಚೇರಿಯಲ್ಲಿ ನೂರೆಂಟು ಆವಾಂತರಗಳು ನಡೆಯುತ್ತಿದ್ದು, ಸರಕಾರದ ಆದೇಶಗಳನ್ನ ಕಸದ ಬುಟ್ಟಿಗೆ ಹಾಕಿ, ಕಾನೂನು ಉಲ್ಲಂಘನೆ ಮಾಡಲಾಗುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ ಉನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು, ಸರಕಾರದ ಆದೇಶವನ್ನ ಉದ್ದೇಶಪೂರ್ವಕವಾಗಿ ಕಸದ ಬುಟ್ಟಿಗೆ ಹಾಕುತ್ತಿದ್ದಾರೆಂಬುದನ್ನ ಸಾಕ್ಷಿ ಸಮೇತ ಕರ್ನಾಟಕವಾಯ್ಸ್.ಕಾಂ ಬಹಿರಂಗ ಮಾಡುತ್ತಿದೆ.
“ಕ್ರಾಸ್ ಡೆಪ್ಟೇಟೇಷನ್” ಮಾಡುವುದನ್ನ ಮುಂದುವರೆಸಿರುವ ಮಹಾನ್ ಉಪನಿರ್ದೇಶಕರು, ತಮಗೇನು ಗೊತ್ತೆ ಇಲ್ಲದಂತೆಯೂ, ಕಾನೂನು ಉಲ್ಲಂಘನೆಯನ್ನೇ ಮಾಡದವರಂತೆ ಕೂಡುತ್ತಿದ್ದಾರೆ.
ನಾಳೆಗೆ ಕರ್ನಾಟಕವಾಯ್ಸ್.ಕಾಂ ಈ ಬಗ್ಗೆ ಸರಕಾರದ ಆದೇಶದ ಜೊತೆಗೆ ಯಾರು ಯಾರನ್ನ, ಎಲ್ಲಿಗೆ, ಯಾವ ಕಾರಣಕ್ಕೆ ಡೆಪ್ಟೇಟೇಷನ್ ಮಾಡಿರಬಹುದು ಎಂಬ ಸಂಪೂರ್ಣ ವಿವರವನ್ನ ಕೊಡುತ್ತೇವೆ.