ಧಾರವಾಡ “ಡಿಡಿಪಿಐ ಕೆಳದಿಮಠ” ಮತ್ತೂ “ಸುಳ್ಳು”- ಒಂದೇ ಕಚೇರಿಯಲ್ಲಿ “ನಾನೂ… ನಾನೂ”….
1 min readಧಾರವಾಡ: ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸುಳ್ಳುಗಳ ಸಾಮ್ಯಾಜ್ಯ ಆರಂಭಗೊಂಡಿದ್ದು, ಸುಳ್ಳು ಮತ್ತೂ ಡಿಡಿಪಿಐ ಅವರ ನಡುವೆ ತೀವ್ರವಾದ ಸ್ಪರ್ಧೆ ನಡೆದಿದೆ ಎಂದು ಮಾನವಂತರು ಮಾತನಾಡಿಕೊಳ್ಳುತ್ತಿದ್ದಾರೆ.
ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ನವಲೂರ ಶಾಲೆಗೆ ಡೆಪ್ಟೇಟೇಷನ್ ಮೂಲಕ ನೇಕಾರನಗರದ ಶಾಲೆಯಿಂದ ಬಂದಿದ್ದ ದೊಡ್ಡವಾಡ ಎಂಬ ಶಿಕ್ಷಕರನ್ನ ಮರಳಿ ಆ ಶಾಲೆಗೆ ಹೋಗುವಂತೆ ಡೆಪ್ಟೇಟೇಷನ್ ರದ್ದು ಮಾಡಿ ಆದೇಶ ಹೊರಡಿಸುತ್ತಾರಷ್ಟೇ, ಅವರನ್ನ ರಿಲೀವ್ ಮಾಡದೇ ಇದ್ದರೆ ಹೈಸ್ಕೂಲ್ ಹೆಡ್‌ಮಾಸ್ಟರ್ ವಿಜಯಕುಮಾರ ಮೇಲೆ ಕ್ರಮ ಜರುಗಿಸುತ್ತೇನೆ ಎಂಬ ಮಾತುಗಳನ್ನೂ ಹೇಳುವುದಿಲ್ಲ.
ಬದಲಿಗೆ ನವಲೂರ ಶಾಲೆಯ ಕೆಲವರು ಬಂದು ಡಿಡಿಪಿಐ ಅವರಿಗೆ “ನೇಕಾರನಗರದಿಂದ ಬಂದ ಮಾಸ್ತರ್ ಇರ್ಲಿ” ಎಂದು ಹೇಳ್ತಿದ್ದಾರೆಂದು ಪುಕಾರು ಎಬ್ಬಿಸುತ್ತಾರೆ. ಅದೇ ವೇಳೆಗೆ ನವಲೂರ ಶಾಲೆಯಿಂದ ಅನಧಿಕೃತವಾಗಿರುವ ಪೋಸ್ಟ್‌ನಲ್ಲಿ ಡೆಪ್ಟೇಟೇಷನ್ ಹೊಂದಿರುವ ದೈಹಿಕ ಶಿಕ್ಷಕರ ಬಗ್ಗೆ ಆದೇಶ ಹೊರಡಿಸಿದ್ದೇನೆ ಎಂದು ಹೇಳುತ್ತಲೇ, ಜಿಲ್ಲೆಯ ಪ್ರಮುಖ ಶಾಸಕರ ಒತ್ತಡ ಬರ್ತಿದೆ ಎಂದು ಮತ್ತೊಂದು ಸುಳ್ಳು ಹೇಳ್ತಾರೆ.
ತಾವೊಬ್ಬ ಘನತೆ ಹೊಂದಿರುವ ಹುದ್ದೆಯಲ್ಲಿದ್ದೇನೆ ಎಂಬುದನ್ನ ಮರೆತಂತೆ ನಡೆದುಕೊಳ್ಳುತ್ತಿರುವ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು, ಮಂಟೂರ ಗ್ರಾಮಸ್ಥರನ್ನ ಮುಂದೆ ಕೂಡಿಸಿಕೊಂಡು ಹುಬ್ಬಳ್ಳಿಯ ಬಿಇಓ ಅವರಿಗೆ ಕಾಲ್ ಮಾಡ್ತಾರೆ.
ಅದರ ಮಾತುಕತೆ ಇಲ್ಲಿದೆ ನೋಡಿ..
ಡಿಡಿಪಿಐ: ನೀವು ಮಂಟೂರ ಶಾಲೆಯ ಅನುದಾನ ಶಿಕ್ಷಕರಿಗೆ ಹೋಗದಂತೆ ಕೋಡ್ ಕ್ರಿಯೇಟ್ ಮಾಡಬೇಡಿ..
ಬಿಇಓ: ಸರ್, ನಾನೇಲ್ಲಿ ಕ್ರಿಯೇಟ್ ಮಾಡೋಕಾಗತ್ತೆ. ನೀವೇ ಅದನ್ನ ಕೊಡಬೇಕು. ನೀವು ಕೊಟ್ರೇ ತಾನೇ ನಾ ಮಾಡೋಕಾಗೋದು…
ಡಿಡಿಪಿಐ: ಅಲ್ಲಲ್ಲಾ.. ಅವರು ಕೇಳಾಕತ್ತಾರ್. ನೀವೂ ಮಾಡಬ್ಯಾಡ್ರೀ..
ಬಿಇಓ: ಸರ್, ನೀವ್ ನಂಗ್ ಅದನ್ನ ಕಳಿಸ್‌ಬ್ಯಾಡ್ರೀ. ನಾ ತೆಗೀದ್ ಬರಲ್ಲಾ…
ಡಿಡಿಪಿಐ: (ಮುಂದೆ ಕುಳಿತಿದ್ದ ಜನರನ್ನ ನೋಡುತ್ತ) ಯಾವುದ್ ಕಾರಣಕ್ಕೂ ಆಗಬಾರದು ನೋಡ್ರೀ. ಕೋಡ್ ಕ್ರಿಯೇಟ್ ಮಾಡಬ್ಯಾಡ್ರೀ…
ಬಿಇಓ: ….!? (ತಲೆಯೊಳಗೆ: ಏನ್ ಶಾಣ್ಯಾರೀಪಾ ಇವರ್. ನಾ ಏನ್ ಹೇಳ್ತೇನಿ, ಇವರ್ ಏನ್ ಮಾತಾಡ್ತಾರ್) (ಇದು ಕಾಲ್ಪನಿಕ)
ಇಂತಹ ಘಟನೆಗಳನ್ನ ನೋಡಿ ಡಿಡಿಪಿಐ ಕಚೇರಿಯಲ್ಲಿ ಸುಳ್ಳು ಬಂದು ಕುಳಿತು ತಾಂಡವ ನೃತ್ಯ ಮಾಡುತ್ತಿದೆ. ಅಲ್ಲಿಯೂ ಕೂಡಾ ಸ್ಪರ್ಧೆ ಏರ್ಪಟ್ಟಿದ್ದು, ಸುಳ್ಳನ್ನ ಮೀರಿಸುವ ರೀತಿಯಲ್ಲಿ ಡಿಡಿಪಿಐ ನಡೆದುಕೊಳ್ಳುತ್ತಿದ್ದಾರೆ.
ಇದನ್ನೇಲ್ಲ ನೋಡುತ್ತಿರುವ ಶಿಕ್ಷಣ ಪ್ರೇಮಿಗಳು ಯಾರಿಗೆ ಜಯವಾಗಬಹುದೆಂದು ಕಾತುರದಿಂದ ಕ್ಷಣ ಕ್ಷಣದ ಸುಳ್ಳುಗಳನ್ನ ನೋಡುತ್ತ ಮತ್ತೂ ಅಲಿಸುತ್ತ ಹಾಗೂ ಮಜಾ ತೆಗೆದುಕೊಳ್ಳುತ್ತ ಮುನ್ನಡೆದಿದ್ದಾರೆ.