ಧಾರವಾಡ ‘DDPI’ ವಿರುದ್ಧ ದೂರು ನೀಡಲು ಮುಂದಾದ ಪ್ರಜ್ಞಾವಂತ ಶಿಕ್ಷಕರು…!?
1 min readಧಾರವಾಡ: ಕರ್ನಾಟಕ ರಾಜ್ಯ ಸರಕಾರ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಕೊಡುತ್ತಿದ್ದು, ಅದಕ್ಕಾಗಿ ಅರ್ಜಿಗಳನ್ನ ಆಹ್ವಾನ ಮಾಡಲಾಗಿದೆ. ಆದರೆ, ಸರಕಾರದ ನಿಯಮಗಳನ್ನ ಗಾಳಿಗೆ ತೂರಿ ಧಾರವಾಡ ಡಿಡಿಪಿಐ ಅವರು ನಡೆದುಕೊಂಡಿದ್ದಾರೆ ಎಂದು ಕೆಲವು ಪ್ರಜ್ಞಾವಂತ ಶಿಕ್ಷಕರು ಆರೋಪಿಸುತ್ತಿದ್ದು, ಅವರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಧಾರವಾಡ ಜಿಲ್ಲೆಯ ಪ್ರತಿಯೊಂದು ತಾಲೂಕಿನ ನಿಷ್ಠಾವಂತ ಶಿಕ್ಷಕರು ಮಾಡಿರುವ ಕೆಲಸಗಳನ್ನ ಗಮನಿಸಬೇಕು. ಎಲ್ಲರ ಪ್ರೊಫೈಲ್ ನೋಡಿ, ರಾಜ್ಯಕ್ಕೆ ಕಳಿಸಬೇಕು ಅಲ್ಲವೇ. ಆದರೆ, ಡಿಡಿಪಿಐ ಅವರು ತಮಗೆ ಅನುಕೂಲಕರವಾದ ಪ್ರೊಫೈಲ್ ಮಾತ್ರ ರಾಜ್ಯಕ್ಕೆ ಕಳಿಸಿದ್ದಾರಂತೆ. ಹಾಗಾಗಿಯೇ ದೂರು ನೀಡಲು ಮುಂದಾಗಿದ್ದಾರಂತೆ.
ಶಿಕ್ಷಕರ ಬಗ್ಗೆ ಗೌರವ ಹೊಂದಿರುವವರು ಧಾರವಾಡ ಜಿಲ್ಲೆಯಲ್ಲಿ ಬಂದಿರುವ ಪ್ರೊಫೈಲ್‌ಗಳನ್ನ ನೋಡಬೇಕು, ಆಗ ಸತ್ಯ ಹೊರ ಬರತ್ತೆ. ಕಳಫೆ ಪ್ರೊಫೈಲ್ ಕಳಿಸುವ ಮೂಲಕ ಮನಃಸಾಕ್ಷಿಯನ್ನ ಮರೆಯಲಾಗಿದೆ ಅನ್ನೋದು ನಿಜ ಶಿಕ್ಷಕರ ದೂರು.
ಕರ್ತವ್ಯದ ಕೊನೆಯ ದಿನಗಳಲ್ಲಿಯಾದರೂ ಡಿಡಿಪಿಐ ಕೆಳದಿಮಠ ಅವರು ವಿವಾದವಿಲ್ಲದೇ ಹೋಗುವುದು ಒಳಿತು. ಶಾಲೆ, ವಿದ್ಯಾರ್ಥಿಗಳಿಗೆ ಆದರ್ಶವಾದ ಶಿಕ್ಷಕರ ಗುರುತಿಸಿ ಪ್ರಶಸ್ತಿ ಕೊಡಿಸಿ. ಇಲ್ಲವಾದರೇ, ಶಿಕ್ಷಕರು ಸುಮ್ಮನೆ ಈ ಬಾರಿ ಕೂಡಲಾರರು ಅನಿಸತ್ತೆ.