ಧಾರವಾಡ “ಡಿಡಿಪಿಐ ಕೆಳದಿಮಠ ಹಗರಣ”- ನಾಳೆ ಹೋರಾಟಕ್ಕೀಳಿದ ಪ್ರಜ್ಞಾವಂತರು…!
1 min readಧಾರವಾಡ: ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ನಕಲಿ ದಾಖಲೆಗಳನ್ನೇ ಅಸಲಿ ಎಂದು ಸರಕಾರಕ್ಕೆ ವಂಚನೆ ಮಾಡಿ, ಶಾಲೆಯೊಂದಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆಂದು ಆರೋಪಿಸಿ, ದಾಖಲೆ ಸಮೇತ ಹೋರಾಟ ನಡೆಸಲು ಪ್ರಜ್ಞಾವಂತರು ನಿರ್ಧರಿಸಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಮಂಟೂರ ಶಾಲೆಯಲ್ಲಿ ನಡೆದಿರುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದರೂ, ಡಿಡಿಪಿಐ ಕೆಳದಿಮಠ ಅವರು ಆಮಿಷಕ್ಕೆ ಒಳಗಾಗಿ, ಸರಕಾರಕ್ಕೆ ವಂಚನೆ ಮಾಡಿದ್ದು, ಅವರ ವಿರುದ್ಧ ನಾಳೆ ಕಚೇರಿ ಎದುರು ಹೋರಾಟ ನಡೆಸುವುದಾಗಿ, ಮಂಟೂರ ಗ್ರಾಮದ ಪ್ರಜ್ಞಾವಂತರು ಕರ್ನಾಟಕವಾಯ್ಸ್. ಕಾಂಗೆ ತಿಳಿಸಿದ್ದಾರೆ.
ಧಾರವಾಡ ಡಿಡಿಪಿಐ ಕೆಳದಿಮಠ ಅವರು ಹಲವು ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುತ್ತಿದ್ದು, ಸರಕಾರದ ನೀತಿ ನಿಯಮಗಳನ್ನ ಗಾಳಿಗೆ ತೂರುತ್ತಿದ್ದಾರೆಂದು ಮಂಟೂರ ಶಾಲೆಗೆ ಸಂಬಂಧಿಸಿದ ಹಲವರು ಆರೋಪಿಸಿದ್ದಾರೆ.
ಡಿಡಿಪಿಐ ಬಗ್ಗೆ ಈ ಹಿಂದೆ ಹೇಳಿಕೆ ನೀಡಿದ್ದ ಗ್ರಾಮಸ್ಥರು…
ನಾಳೆ ನಡೆಯುವ ಹೋರಾಟದಲ್ಲಿ ದಾಖಲೆಗಳನ್ನ ಹೊರಗೆ ಹಾಕಿ, ಡಿಡಿಪಿಐ ಕೆಳದಿಮಠ ಅವರ ಬಣ್ಣವನ್ನ ಹೊರಜಗತ್ತಿಗೆ ತೋರಿಸುತ್ತೇವೆ ಎಂದಿದ್ದಾರೆ.