ಧಾರವಾಡ “ಡಿಡಿಪಿಐ” ಮೇಲೆ ಕೇಸ್ ದಾಖಲಿಸಲು ಆಗ್ರಹ… ನಕಲಿ-ಅಸಲಿ ಸತ್ಯ ಬಿಚ್ಚಿಟ್ಟ “ಪ್ರಮುಖ”ರು.. ವೀಡಿಯೋ ಸಮೇತ….
1 min readಹುಬ್ಬಳ್ಳಿ: ಖಾಸಗಿ ಶಾಲೆಯ ನಕಲಿ ದಾಖಲೆಗಳನ್ನೇ ಅಸಲಿ ಎಂದು ಸರಕಾರಕ್ಕೆ ಮೋಸ ಮಾಡಿ, ಅನುದಾನ ಬಿಡುಗಡೆಯನ್ನ ಧಾರವಾಡದ ಡಿಡಿಪಿಐಯವರು ಮಾಡಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನಾಗರಹಳ್ಳಿ ಗ್ರಾಮದ ಹಿರಿಯರು ಆಗ್ರಹಿಸಿದ್ದಾರೆ.
ಮಂಟೂರ ಭಾಗದಲ್ಲಿ ಇರುವ ಖಾಸಗಿ ಶಾಲೆಯ ಆಡಳಿತ ಮಂಡಳಿ ಮಾಡಿರುವ ಪ್ರಮಾದದ ಬಗ್ಗೆ ಸ್ವತಃ ಮೇಜರ್ ಸಿದ್ಧಲಿಂಗಯ್ಯ ಅವರು, ಇಲಾಖೆಯ ಕಮೀಷನರ್ ಇದ್ದಾಗ ನಕಲಿ ಎಂದು ಆದೇಶ ಮಾಡಿದ್ದಾರೆ. ಈಗ ಅದನ್ನ ಅಸಲಿ ಎಂದು ಬಿಂಬಿಸುವ ಮೂಲಕ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಇವರ ಮೇಲೆ ಕೇಸ್ ದಾಖಲಿಸಬೇಕೆಂದು ನಾಗರಹಳ್ಳಿ ಗ್ರಾಮದ ಭರಮಗೌಡರ ಆಗ್ರಹಿಸಿದ್ದಾರೆ.
ಪೂರ್ಣ ವೀಡಿಯೋ ನೋಡಿ… ಡಿಡಿಪಿಐ ಮಾಡಿದ್ದು ಏನು ಎಂಬುದನ್ನ ತಿಳಿಯಿರಿ..
ಪ್ರಕರಣವನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕಿದ್ದು, ಸತ್ಯಾಸತ್ಯತೆಯ ಬಗ್ಗೆ ಹಲವು ಮಾಹಿತಿಯನ್ನ ಕ್ರೋಢಿಕರಿಸಿದೆ. ಸ್ವತಃ ಡಿಡಿಪಿಐ ಆಗಿರುವ ಪ್ರಮಾದದ ಬಗ್ಗೆ ಕೇವಲ ಕಥೆ ಹೇಳ್ತಾರೆ ಹೊರತೂ, ಅದನ್ನ ಸರಿ ಮಾಡಲು ಹೋಗುತ್ತಿಲ್ಲ. ಹೀಗಾಗಿ ಭರಮಗೌಡರ ಅವರು ಆರೋಪಿಸಿರುವ ಪ್ರಕಾರ ಡಿಡಿಪಿಐ ಅವರು ಆಮಿಷಕ್ಕೆ ಒಳಗಾಗಿರುವುದು ಸತ್ಯವೇ ಎಂಬ ಪ್ರಶ್ನೆ ಹೆಚ್ಚಾಗುತ್ತಿದೆ.
ಮಕ್ಕಳೇ ಇಲ್ಲದ, ನಕಲಿ ದಾಖಲೆ ಸೃಷ್ಟಿಸಿದ ಶಾಲೆಯ ಶಿಕ್ಷಕರನ್ನ “ಕಾಂಪ್ರೂಮೈಸ್” ಮಾಡೋಕೆ ತೆರೆಮರೆ ಪ್ರಯತ್ನ ನಡೆಸಲಾಗುತ್ತಿದೆ ಹೊರತೂ, ಸರಕಾರಕ್ಕೆ ಮಾಡಿರುವ ವಂಚನೆಯನ್ನ ಸರಿ ಮಾಡಲು ಆಗದೇ ಇರುವುದು ಸೋಜಿಗ ಮೂಡಿಸಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು, ಈ ಬಗ್ಗೆ ಗಮನ ಹರಿಸಬೇಕಿದೆ. ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಅನಾಚಾರವನ್ನ ತಡೆಗಟ್ಟಬೇಕಿದೆ.