ಧಾರವಾಡ ಡಿಡಿಪಿಐ “ಆರ್ಡರ್”- ಕ್ರಾಸ್ ಕ್ಯಾನ್ಸಲ್: ಉಳಿದ ತಪ್ಪುಗಳ ಸರಿಯಾಗೋದು ಯಾವಾಗ…!?
1 min readಧಾರವಾಡ: ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಹಲವು ಕಾನೂನು ಬಾಹಿರ ಕ್ರಮಗಳ ಬಗ್ಗೆ ನಿರಂತರವಾಗಿ ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ಹೊರ ಹಾಕುತ್ತಿದ್ದು, ಕೊನೆಗೂ ಡಿಡಿಪಿಐ ಅವರು ಒಂದು ಆರ್ಡರ್ ಮಾಡುವ ಮೂಲಕ ಸರಿಯಾಗುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
ಧಾರವಾಡ ತಾಲೂಕಿನ ನವಲೂರ ಶಾಲೆಯ ಶಿಕ್ಷಕರನ್ನ ಇಲ್ಲದ ಪೋಸ್ಟ್‌ಗೆ ಧಾರವಾಡ ಶಹರದ ದೈಹಿಕ ಶಿಕ್ಷಣ ಪರಿವೀಕ್ಷಕರನ್ನಾಗಿ ಮಾಡಿರುವ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು, ನವಲೂರ ಶಾಲೆಗೆ 450ಕ್ಕೂ ಹೆಚ್ವು ವಿದ್ಯಾರ್ಥಿಗಳಿದ್ದ ನೇಕಾರನಗರದ ಶಾಲೆಯಿಂದ ಡೆಪ್ಟೇಟೇಷನ್ ಮಾಡಿದ್ದರು. ಈಗ ಈ ಆದೇಶವನ್ನ ರದ್ದು ಮಾಡಿ, ಆದೇಶ ಹೊರಡಿಸಿದ್ದಾರೆ.
ಸಾಕಷ್ಟು ಬುದ್ಧಿವಂತರಾಗಿರುವ ಡಿಡಿಪಿಐ ಕೆಳದಿಮಠ ಅವರು, ನವಲೂರ ಶಾಲೆಯಿಂದ ಬಂದವರನ್ನ ಮರಳಿ ಶಾಲೆಗೆ ಕಳಿಸದೇ, ಅಲ್ಲಿದ್ದವರನ್ನ ಮಾತ್ರ ಮರಳಿ ನೇಕಾರನಗರಕ್ಕೆ ಆದೇಶ ಮಾಡಿದ್ದಾರೆ.
ಹುಬ್ಬಳ್ಳಿಯ ಗೋಕುಲ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೂ, ರಾಮಾಪುರ ಎನ್ನುವವರನ್ನ ಸಾಕ್ಷರತಾ ನೆಪದಲ್ಲಿ ಡೆಪ್ಟೇಟೇಷನ್ ಮಾಡಲಾಗಿದೆ. ಇನ್ನೂ ಹಲವು ಕಾನೂನು ಬಾಹಿರ ಕ್ರಮಗಳನ್ನು ತೆಗೆದುಕೊಂಡು, ಅವುಗಳನ್ನ ಸರಿ ಮಾಡಲು ಯತ್ನ ನಡೆದಿದ್ದು, ಕರ್ನಾಟಕವಾಯ್ಸ್.ಕಾಂ ಪ್ರತಿಯೊಂದು ಆಯಾಯವನ್ನ ಹೊರಗೆ ಹಾಕಲಿದೆ.