ಧಾರವಾಡ “ಡಿಡಿಪಿಐ ಕ್ರಾಸ್ ಡೆಪ್ಟೇಟೇಷನ್”- ಸರಕಾರಿ ಆದೇಶ ಉಲ್ಲಂಘನೆ…

ಧಾರವಾಡ: ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಜಿಲ್ಲೆಯಲ್ಲಿ ಸರಕಾರದ ಆದೇಶಗಳನ್ನ ಗಾಳಿಗೆ ತೂರಿ ತಮಗೆ ಅನುಕೂಲವಾಗುವ ಆದೇಶಗಳನ್ನ ಮಾಡಿಕೊಂಡು ನಡೆದಿದ್ದು, ಶಿಕ್ಷಣ ಇಲಾಖೆಯನ್ನ ಹಳ್ಳ ಹಿಡಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸರಕಾರದ ಈ ಆದೇಶವನ್ನ ಮೊದಲು ಸಂಪೂರ್ಣವಾಗಿ ಓದಿ, ನಿಮಗೆ ಸರಕಾರದ ಉದ್ದೇಶವೇನು ಎಂಬುದು ಗೊತ್ತಾಗತ್ತೆ.
ಈ ಥರ ಸರಕಾರದ ಆದೇಶವಿದ್ದರೂ ಧಾರವಾಡ ಜಿಲ್ಲೆಯಲ್ಲಿ ಅಂತಿದಿತ್ತ, ಇತ್ತಿಂದತ್ತ ಡೆಪ್ಟೇಟೇಷನ್ ಮಾಡಲಾಗುತ್ತಿದೆ. ಹುಬ್ಬಳ್ಳಿಯ ಗೋಕುಲ ಬಂಜಾರ ಕಾಲನಿಯಲ್ಲಿರುವ ಶಾಲೆಯಲ್ಲಿದ್ದ ಸುಜಾತಾ ದೇಸಾಯಿ ಅವರನ್ನ ಗೋಪನಕೊಪ್ಪದ ಶಾಲೆಗೆ ಡೆಪ್ಟೇಟೇಷನ್ ಮಾಡಿ, ಅವರಿದ್ದ ಬಂಜಾರ ಕಾಲನಿಯಲ್ಲಿನ ಶಾಲೆಗೆ ಆನಂದನಗರದ ಶಾಲೆಯಲ್ಲಿದ್ದ ಎಂ.ಎಚ್.ಹೊಸಮನಿ ಅವರನ್ನ ಬಂಜಾರ ಕಾಲನಿಯ ಶಾಲೆಗೆ ಡೆಪ್ಟೇಟೇಷನ್ ಮಾಡಲಾಗಿದೆ. ಇದಕ್ಕೊಂದು ಕಾರಣವಿದೆ, ಅದೇದಂರೆ, ಬಂಜಾರ ಕಾಲನಿಯಲ್ಲಿ ಇದ್ದ ಸುಜಾತಾ ದೇಸಾಯಿ ಮತ್ತು ಮಾರುತಿ ಬಂಡಿವಡ್ಡರ (ನಾಗಾವಿ) ಸಂಘದಲ್ಲಿ ಉಪಾಧ್ಯರಾಗಿದ್ದರಿಂದ, ಶಾಲೆಯಲ್ಲಿ ಇರೋದು ಕಡಿಮೆಯಾಗಿತ್ತು. ಈಗ ಆನಂದನಗರದಲ್ಲಿದ್ದ ಎಂ.ಎಚ್.ಹೊಸಮನಿ ಅವರು ಸದ್ಯ ಬಂಜಾರಾ ಕಾಲನಿಯಲ್ಲಿರುವ ಮಾರುತಿ ನಾಗಾವಿಯವರ ಪತ್ನಿಯಾಗಿದ್ದಾರೆ. ಆನಂದನಗರದಲ್ಲಿ ಶಿಕ್ಷಕಿಯರ ಅವಶ್ಯತೆಯಿದ್ದರೂ “ಕ್ರಾಸ್” ಮಾಡಲಾಗಿದೆ.
ಗೋಕುಲದ ಶಾಲೆಯಲ್ಲಿದ್ದ ಜಿ.ಎಲ್.ರಾಮಾಪುರ ಅವರನ್ನ ಉಣಕಲ್‌ನ ಅವರ ಪತ್ನಿ ಪಿ.ಜಿ.ರಾಮಾಪುರ ಕೆಲಸ ಮಾಡುತ್ತಿರುವ ಶಾಲೆಗೆ ‘ಡೆಪ್ಟೇಟೇಷನ್’ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಇನ್ನೂ ಹಲವು ವಿಷಯಗಳಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನೂ ಕರ್ನಾಟಕವಾಯ್ಸ್. ಕಾಂ ನಿಖರ ಮಾಹಿತಿ ನೀಡಲಿದೆ.
ಧಾರವಾಡದಲ್ಲಿಯೂ ಇಂತಹ ಘಟನೆಗಳು ಸಾಕಷ್ಟು ನಡೆದಿದ್ದು, ಡಿಡಿಪಿಐ ಅವರು ಸರಕಾರದ ಆದೇಶವನ್ನ ಉಲ್ಲಂಘನೆ ಮಾಡಲು ಜನಪ್ರತಿನಿಧಿಗಳ ಹೆಸರನ್ನೂ ಆದೇಶದಲ್ಲಿಯೇ ಬಳಕೆ ಮಾಡಿದ್ದು, ಆ ಪತ್ರವೂ ಕರ್ನಾಟಕವಾಯ್ಸ್. ಕಾಂಗೆ ಲಭಿಸಿವೆ. ವಿಕಲಚೇತನರು, ಚಿಕ್ಕ ಮಗು ಇದ್ದವರು, ಅನಾರೋಗ್ಯ ಪೀಡಿತರು, ಗರ್ಭಿಣಿಯರು, ಕೌಟುಂಬಿಕ ಸಮಸ್ಯೆ ಇದ್ದವರು, ಹಿರಿಯ ಜನ ನಾಯಕರ ಶಿಫಾರಸ್ಸು ತಂದು ಕಣ್ಣೀರಿಟ್ಟರೂ ಕಣ್ಣಿಗೆ ಕಾಣಲಿಲ್ಲ ನಿಯೋಜನೆ ಮಾಡಲ್ಲಿಲ್ಲ.
ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಹೀಗೇಕೆ ಮಾಡುತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಇದಕ್ಕೇನಾದರೂ ಹೊಡೆದಮನಿ ಪ್ರಸಾದ ಸ್ವೀಕರಿಸಿದ್ಸಾನೋ… ಉತ್ತರವನ್ನ ಸರಕಾರಕ್ಕೆ ಡಿಡಿಪಿಐ ಕೊಡಬೇಕಿದೆ.