Posts Slider

Karnataka Voice

Latest Kannada News

ಧಾರವಾಡ ಡಿಸಿ ಆಫೀಸ್‌ನಲ್ಲೇ ಚೋರಿ… ಸಿಕ್ಕವರ ವಿಚಾರಣೆ…!!?

Spread the love

ಧಾರವಾಡ: ಇಡೀ ಜಿಲ್ಲೆಯ ಆಡಳಿತ ವ್ಯವಸ್ಥೆಯನ್ನ ಸರಿದೂಗಿಸುವ ಕಚೇರಿಯಲ್ಲೇ ಕಳ್ಳತನವಾದ ಪ್ರಕರಣ ನಡೆದಿದ್ದು, ಕೃತ್ಯದಲ್ಲಿ ಭಾಗಿಯಾಗಿರುವವರು ಎನ್ನಲಾದವರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಬ್ಯಾಟರಿಗಳನ್ನ ಕದ್ದೋಯ್ದ ಘಟನೆ ನಡೆದಿದ್ದು, ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನು ಬಿದ್ದಿದ್ದ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ನಿಖರವಾದ ಮಾಹಿತಿ ಹೊರ ಬರುವ ಭರವಸೆ ಹೊಂದಿರುವ ಸಾಧ್ಯತೆ ಕಂಡು ಬಂದಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿನ ಈ ಘಟನೆ ಸಾರ್ವಜನಿಕರಲ್ಲಿ ಜಿಜ್ಞಾಸೆ ಮೂಡಿಸಿದೆ.


Spread the love

Leave a Reply

Your email address will not be published. Required fields are marked *