ಧಾರವಾಡದ “ಜನ್ನತನಗರ”ದಲ್ಲಿ ಸಿಲಿಂಡರ್ ಪ್ಲ್ಯಾಶ್ ಫೈರ್- ಒಂದೇ ಕುಟುಂಬದ ಏಳು ಜನರಿಗೆ ಗಾಯ…
ಧಾರವಾಡ: ಮನೆಬಳಕೆಯ ಗ್ಯಾಸ್ ಸಿಲಿಂಡರ್ ಲೀಕ್ ಆದ ಸಮಯದಲ್ಲಿ ಬೆಂಕಿ ತಗುಲಿ ಒಂದೇ ಕುಟುಂಬದ ಏಳು ಜನರು ಗಾಯಗೊಂಡ ಘಟನೆ ಧಾರವಾಡ ನಗರದ ಜನ್ನತನಗರ ಬಳಿಯ ಚುರಮರಿ ಭಟ್ಟಿ ಬಡಾವಣೆಯಲ್ಲಿ ನಡೆದಿದೆ.
ಸಿಲಿಂಡರ್ ಲೀಕ್ ಆಗುತಿದ್ದ ಬಗ್ಗೆ ತಿಳಿಯದೇ ಗ್ಯಾಸ್ ಆನ್ ಮಾಡಿರುವ ಹಿನ್ನೆಲೆಯಲ್ಲಿ ಫ್ಲ್ಯಾಶ್ ಫಾಯರ್ ಆಗಿ ಮನೆಯಲ್ಲಿ ಇದ್ದವರಿಗೆ ಬೆಂಕಿ ತಗುಲಿದೆ. ಗಾಯಾಳುಗಳಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಕಿಮ್ಸಗೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ. ಘಟನೆಯಲ್ಲಿ ಇನಾಯಾ (3), ಕೈಫ್ (7), ಅಮಿನಾ (26), ಇಸ್ಮಾಯಿಲ್ (35), ಜರಿನಾ (65) ಮಹಿರಾನ್ (13) ಗಾಯಗೊಂಡಿದ್ದಾರೆ.
