ಧಾರವಾಡದಲ್ಲೊಂದು ಅಮಾನವೀಯ ಘಟನೆ.…!

ಧಾರವಾಡ: ನಗರದಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ಆ ಘಟನೆಯನ್ನ ಮುಚ್ಚಿ ಹಾಕಲು ರಾಜಕೀಯ ಪಕ್ಷವೊಂದರ ಮುಖಂಡ ಮುಂದಾಗಿದ್ದು, ಅಸಂಘಟಿತ ಕಾರ್ಮಿಕನ ಬಡತನವನ್ನ ತಮ್ಮ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ಮುಂದಾದ ಘಟನೆ ನಡೆದಿದೆ.

ಧಾರವಾಡದ ಶಿವಗಂಗಾನಗರದಲ್ಲಿನ ಕಟ್ಟಡವೊಂದರಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ನಾಗರಾಜ ರಾಮಚಂದ್ರಪ್ಪ ಕಟಾರೆ ಎಂಬಾತನ ಕೈ, ಕೈಕಾಲು ಹಗ್ಗದಿಂದ ಕಟ್ಟಿ ಹಿಗ್ಗಾ-ಮುಗ್ಗಾ ಥಳಿಸಲಾಗಿದೆ.
ಕಟ್ಟಡದ ಕೆಲಸಕ್ಕೆ ಕರೆದುಕೊಂಡ ಮೇಸ್ತ್ರಿಯೇ ಹೀಗೆ ನಡೆದುಕೊಂಡಿದ್ದು, ತೀವ್ರವಾಗಿ ಗಾಯಗೊಂಡ ಕಾರ್ಮಿಕ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೊಂದು ಅಮಾನವೀಯವಾಗಿ ಘಟನೆ ನಡೆದರೂ ಆಡಳಿತಾರೂಢ ಪಕ್ಷದ ಮುಖಂಡನೋರ್ವ ಈ ಪ್ರಕರಣವನ್ನ ಸೆಟ್ಲ್ ಮಾಡಲು ತಿರುಗಾಡುತ್ತಿದ್ದು, ಪೊಲೀಸರು ಕೂಡಾ ಇದಕ್ಕೆ ಮಣೆ ಹಾಕುತ್ತಿದ್ದಾರೆಂದು ಹೇಳಲಾಗುತ್ತಿದೆ.
ಧಾರವಾಡದಲ್ಲಿ ಇಂತಹದೊಂದು ಘಟನೆ ನಡೆದಿದರಲೇ ಇಲ್ಲ. ಇಂತಹ ಘಟನೆ ನಡೆದ ತಕ್ಷಣವೇ ಪೊಲೀಸರು ಕ್ರಮವನ್ನ ಜರುಗಿಸಿ, ಆರೋಪಿಯನ್ನ ಬಂಧನ ಮಾಡಬೇಕಿತ್ತು. ಆದರೂ, ಅವರು ರಾಜಕೀಯ ಮುಖಂಡನ ಮಾತು ಕೇಳಿ, ಯಾವುದೇ ಕ್ರಮ ಜರುಗಿಸದೇ ಇರುವುದು ಸೋಜಿಗದ ವಿಷಯವಾಗಿದೆ.