“ಧಾರವಾಡದ ಕಳ್ಳರನ್ನ” ಹೆಡಮುರಿಗೆ ಕಟ್ಟಿದ ಉಪನಗರ ಠಾಣೆ ಪೊಲೀಸರು…
1 min readಧಾರವಾಡ: ನಗರದಲ್ಲಿನ ಎಂಟು ಕಳ್ಳತನವೂ ಸೇರಿದಂತೆ ಒಂಬತ್ತು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರನ್ನ ಬಂಧನ ಮಾಡುವಲ್ಲಿ ಧಾರವಾಡದ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನ ಧಾರವಾಡದ ಜಕಣಿಭಾವಿಯ ಅಭಿಷೇಕ ಅಂಜನೇಯ ಅಬ್ಬೂರ, ಗೌಳಿಗಲ್ಲಿಯ ಅಕ್ಷಯ ಕಿಶೋರ ಪುಲಸಂಗೆ, ಭೂಸಪ್ಪ ಚೌಕನ ಹಣ್ಣಿನ ವ್ಯಾಪಾರಿ ಹಾಜಿಭಾಷಾ ಮಹ್ಮದರಫೀಕ ಯಲ್ಲಾನೂರ ಹಾಗೂ ಭೂಸಪ್ಪ ಚೌಕಿನ ಹೊಟೇಲ್ ನಲ್ಲಿನ ಕೆಲಸಗಾರ ಸೈಯದಸೋಹೇಲ್ ಸೈಯದಜಾಕೀರ ಬಾನದಾರ ಎಂದು ಗುರುತಿಸಲಾಗಿದೆ.
ಆರೋಪಗಳಿಂದ 105 ಗ್ರಾಂ ಚಿನ್ನ, 732 ಗ್ರಾಂ ಬೆಳ್ಳಿ ಹಾಗೂ ಸ್ಕೂಟಿಯನ್ನ ವಶಕ್ಕೆ ಪಡೆಯಲಾಗಿದ್ದು, ಇವುಗಳ ಅಂದಾಜು ಮೌಲ್ಯ 491600 ದ್ದಾಗಿದೆ.
ಎಸಿಪಿ ವಿಜಯಕುಮಾರ ತಳವಾರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಯು.ಎಂ.ಪಾಟೀಲ, ಎಸ್.ಟಿ.ದಾಸರೆಡ್ಡಿ, ಎಲ್.ಕೆ.ಕೊಡಬಾಳ, ಎಎಸ್ಐಗಳಾದ ಎಸ್.ಕೆ.ಕರೆಪ್ಪಗೌಡರ, ಕೆ.ಎನ್.ನೆಲಗುಡ್ಡ, ಎಂ.ಎಚ್. ಶಿವರಾಜ್, ಸಿಬ್ಬಂದಿಗಳಾದ ಸಿ.ಟಿ.ನಡುವಿನಮನಿ, ಎಂ.ಜಿ.ಪಾಟೀಲ, ಕುಮಾರ ಬಾಗವಾಡ, ಶ್ರೀಕಾಂತ ತಲ್ಲೂರ, ಬಿ.ವಿ.ಸಣ್ಣಪ್ಪನವರ, ರವಿ ದೊಡಮನಿ, ಹುಲಿಗೆಪ್ಪ ವಡ್ಡರ, ಬಸವರಾಜ ಮಾಗುಂಡನವರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.