ಧಾರವಾಡ: “ಆ ವಿದ್ಯಾರ್ಥಿಗಳ” ಸಮ್ಮುಖದಲ್ಲಿ “ಸಲಕಿ ಹಿಡ್ದು” ಫೀಲ್ಡಗಿಳಿದ ಸಹಾಯಕ ಆಯುಕ್ತ…!!!

ಧಾರವಾಡ: ಜನರ ನೆಮ್ಮದಿಗಾಗಿ ಹಗಲಿರುಳು ಶ್ರಮಿಸುವ ಅಧಿಕಾರಿಗಳಿಗೆ ಮತ್ತಷ್ಟು ಹುಮ್ಮಸ್ಸು ಬಂದರೇ, ಏನು ಮಾಡಬಹುದು ಎಂಬುದಕ್ಕೆ ಧಾರವಾಡದ ಸಂಪಿಗೆನಗರ ಇಂದು ಸಾಕ್ಷಿಯಾಗಿಯಿತು.
ಹೌದು… ಮೊದಲು ಈ ವೀಡಿಯೋ ಪೂರ್ಣವಾಗಿ ನೋಡಿಬಿಡಿ…
ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಅರವಿಂದ ಜಮಖಂಡಿ ಅವರು ವಿದ್ಯಾರ್ಥಿಗಳ ಜೊತೆಗೂಡಿ ಸ್ವಚ್ಚತೆಗೆ ಮುಂದಾಗಿದ್ದು, ಜನಮನ ಗೆದ್ದಿತ್ತು. ಎಲ್ಲರೂ ನಗರವನ್ನ ಚೆನ್ನಾಗಿರಿಸುವ ಇವರ ಕನಸಿಗೆ ಪ್ರತಿಯೊಬ್ಬರೂ ಸಾಥ್ ಕೊಡಬೇಕಿದೆ.
ಜೆಎಸ್‌ಎಸ್‌ನ ಕೆ.ಎಚ್.ಕಬ್ಬೂರ ತಾಂತ್ರಿಕ ಕಾಲೇಜಿನ ಎನ್‌ಎಸ್‌ಎಸ್ ವಿಭಾಗದ ನೂರಾರೂ ವಿದ್ಯಾರ್ಥಿಗಳು ಈರಣ್ಣ ಪತ್ತಾರ ಅವರ ಮೂಲಕ ಸ್ವಚ್ಛತೆಗೆ ಮುಂದಾಗಿದ್ದಾರೆ.
ಆರೋಗ್ಯ ಅಧಿಕಾರಿ ಪದ್ಮಾವತಿ ತುಂಬಗಿ, ಶಾಂತಗೌಡ ಬಿರಾದಾರ, ಮಹಾವೀರ ಉಪಾಧ್ಯಾಯ, ವಿಶ್ವನಾಥ ಯಲಿಗಾರ, ಎಂ.ಡಿ.ಪಾಟೀಲ, ಎಸ್.ಎನ್.ಗೌಡರ, ರವಿ ಪವಾರ, ಡಾ.ಸತೀಶ ಹೊನಕೇರಿ, ರವಿ ಶೆಟ್ಟಿ, ಕಲ್ಮೇಶ ಸಿದ್ಧಾಟಗಿಮಠ, ಶಶಿಕಲಾ ಬಸವರೆಡ್ಡಿ, ಸಂಜೀವಕುಮಾರ ಹೊಸಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.