ಧಾರವಾಡ ಜಿಲ್ಲೆಯ ಪಾಸಿಟಿವ್ ವ್ಯಕ್ತಿಗಳು ಎಲ್ಲೇಲ್ಲಿ ಸಂಚರಿಸಿದ್ದಾರೆ ಗೊತ್ತಾ: ಜಿಲ್ಲಾಧಿಕಾರಿ ಮಾಹಿತಿಯಿಲ್ಲಿದೆ ನೋಡಿ
1 min readಧಾರವಾಡ: ಮೇ.17 ರಂದು ದೃಢಪಟ್ಟಿರುವ ಜಿಲ್ಲೆಯ ನಾಲ್ವರು ಕೊರೊನಾ ಸೋಂಕಿತರ ಪ್ರಯಾಣ ವಿವರವನ್ನು ಜಿಲ್ಲಾಧಿಕಾರಿಗಳು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದ್ದಾರೆ.
ಪಿ- 1123 ಇವರ ಪ್ರಯಾಣ ವಿವರ
ಪಿ – 1123 ( 39,ಪುರುಷ) ಇವರು ಮಹಾರಾಷ್ಟ್ರದ ಮುಂಬಯಿ ಶಹರದ ನಿವಾಸಿಯಾಗಿರುತ್ತಾರೆ , ದಿನಾಂಕ : 11-05-2020 ಬಾಡಿಗೆ ವಾಹನದ ಮೂಲಕ ಮಧ್ಯಾಹ್ನ 12:00 ಗಂಟೆಗೆ ಮುಂಬೈಯಿಂದ ಹೊರಟು, ಮಧ್ಯಾಹ್ನ 2:00 ಗಂಟೆಗೆ ಪುಣೆ ಹೆದ್ದಾರಿ ಪಕ್ಕದ ಶಾಯಾಜಿ ಹೊಟೇಲ್ ಹತ್ತಿರ ತಮಗೆ ಪರಿಚಿತರಾದ ಹುಬ್ಬಳ್ಳಿಯ ನವಅಯೋಧ್ಯಾನಗರದ ನಿವಾಸಿಯೊಬ್ಬರನ್ನು ಸಹ ಪ್ರಯಾಣಿಕನನ್ನಾಗಿ ಹತ್ತಿಸಿಕೊಂಡಿರುತ್ತಾರೆ. ಮಧ್ಯಾಹ್ನ 3.30 ಕ್ಕೆ ಕೊಲ್ಲಾಪುರ ಚೆಕ್ ಪೋಸ್ಟ್ ಮೂಲಕ ಹೊರಟು ನಂತರ ಸಂಜೆ 5.30ಕ್ಕೆ ನಿಪ್ಪಾಣಿ ಚೆಕ್ ಪೋಸ್ಟ್ ದಾಟಿ ದಿ : 12-05-2020 ರಂದು ಮಧ್ಯರಾತ್ರಿ 1:30 am ಕ್ಕೆ ಹುಬ್ಬಳ್ಳಿ ಬೈಪಾಸ್ ತಲುಪಿರುತ್ತಾರೆ. ದಿ : 12.05.2020 ರಂದು 1:40 am ಕ್ಕೆ ಸಹೋದರನ ಬೈಕ್‌ನಲ್ಲಿ ಹುಬ್ಬಳ್ಳಿ ಬೈಪಾಸ್‌ನಿಂದ ಹೊರಟು 2:00 am ಗೆ ಹಳೇ ಹುಬ್ಬಳ್ಳಿಯ ನವ ಅಯೋಧ್ಯಾನಗರದಲ್ಲಿರುವ ಸಹೋದರಿಯ ಮನೆಗೆ ಹೋಗಿರುತ್ತಾರೆ. ಅದೇ ದಿವಸ ಬೆಳಿಗ್ಗೆ 10:30 ಕ್ಕೆ ಬೈಕ್‌ನಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಚಿಕಿತ್ಸೆಗೆ ತೆರಳಿ ಮೂಗು ಮತ್ತು ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟಿದ್ದಾರೆ. ದಿನಾಂಕ : 16.05.2020 ರಂದು ಇವರು ಕೋವಿಡ್ -19 ಸೊಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿರುತ್ತದೆ.
ಪಿ- 1124 ಇವರ ಪ್ರಯಾಣ ವಿವರ
ಪಿ – 1124 (16, ಪುರುಷ) ಇವರು ಧಾರವಾಡ ಜಿಲ್ಲೆ ಹುಬ್ಬಳ್ಳಿ ಶಹರ ಕೇಶ್ವಾಪುರದ ನಿವಾಸಿಯಾಗಿದ್ದಾರೆ.ಮೇ.01 ರಂದು ಸೋಂಕು ದೃಢಪಟ್ಟ ಪಿ – 589 ರವರ ಮಗನಾಗಿರುತ್ತಾರೆ . ಇವರು ಏಪ್ರಿಲ್ ತಿಂಗಳಲ್ಲಿ ಕೇಶ್ವಾಪುರದ ತಮ್ಮ ಮನೆಯ ಸುತ್ತಮುತ್ತ ಮಹಾವೀರ ನಗರ , ಶಾಂತಿನಗರ , ಬೆಂಗೇರಿ ಹಾಗೂ ಶಿರಡಿ ನಗರ ಮುಂತಾದ ಕಡೆಗಳಲ್ಲಿ ಸಂಚರಿಸಿರುವುದು ಕಂಡುಬರುತ್ತದೆ. ಇವರ ತಂದೆ ಪಿ – 589 ರವರು ಕೋವಿಡ್ -19 ಸೋಂಕಿತರೆಂದು ಕಂಡುಬಂದಿದ್ದರಿಂದ ಪಿ-1124 ಅವರನ್ನು ದಿನಾಂಕ : 01-05-2020 ರಿಂದ ಸರ್ಕಾರಿ ಕ್ಯಾರಟೈನ್‌ನಲ್ಲಿ ಇರಿಸಲಾಗಿತ್ತು. ದಿನಾಂಕ : 16.05.2020 ರಂದು ಕೋವಿಡ್ -19 ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ .
ಪಿ – 1142 ಇವರ ಪ್ರಯಾಣ ವಿವರ
ಪಿ- 1142 ( 28, ಮಹಿಳೆ) ಇವರು ಮಹಾರಾಷ್ಟ್ರದ ಮುಂಬಯಿ ಶಹರದ ನಿವಾಸಿಯಾಗಿರುತ್ತಾರೆ . ಇವರು ದಿನಾಂಕ : 14.05.2020 ರಂದು ಬೆಳಿಗ್ಗೆ 7:00 ಗಂಟೆಗೆ ತಮ್ಮ ಸ್ವಂತ ವಾಹನ ಸಂಖ್ಯೆ : ಎಮ್.ಎಚ್ .06 – ಎ.ಬಿ -7810 ನಲ್ಲಿ ತಮ್ಮ ಪತಿ , ಮಗಳು ಹಾಗೂ ವಾಹನ ಚಾಲಕ ಸೇರಿ ಒಟ್ಟು 4 ಜನರೊಂದಿಗೆ ಮುಂಬೈಯಿಂದ ಹೊರಟು ಸತಾರಾ ಚೆಕ್‌ಪೋಸ್ಟ್ ಮಧ್ಯಾಹ್ನ 12:00 ಗಂಟೆಗೆ ತಲುಪಿರುತ್ತಾರೆ . ವಾಹನದ ಟೈಯರ್ ಹಾಳಾದ ಕಾರಣ ಸಂಜೆ 6:00 ಗಂಟೆಗೆ ರವರೆಗೆ ಸತಾರಾದಲ್ಲಿ ಕಾಲಕಳೆದಿರುತ್ತಾರೆ. ನಂತರ ರಾತ್ರಿ 10:30 ಕ್ಕೆ ಕರ್ಕರ ಚೆಕ್‌ಪೋಸ್ಟ್ ಮೂಲಕ ಹೊರಟು ದಿ : 15.05.2020 ರಂದು ಮಧ್ಯರಾತ್ರಿ 12:00 ಗಂಟೆಗೆ ನಿಪ್ಪಾಣಿ ಚೆಕ್‌ಪೋಸ್ಟ್ ತಲುಪಿರುತ್ತಾರೆ . ದಿನಾಂಕ : 15.05.2020 ರಂದು ಬೆಳಗಾವಿ ಹತ್ತಿರದ ಪೆಟ್ರೋಲ್ ಬಂಕ್‌ನ್ನು ಬೆಳಗಿನಜಾವ 2:30 ಕ್ಕೆ ತಲುಪಿ ತಮ್ಮ ವಾಹನದಲ್ಲಿ ಬೆಳಿಗ್ಗೆ 5:00 ಗಂಟೆಯವರೆಗೆ ವಿಶ್ರಾಂತಿ ಪಡೆದಿರುತ್ತಾರೆ . ನಂತರ ಬೆಳಿಗ್ಗೆ 9:00 ಗಂಟೆಗೆ ಹುಬ್ಬಳ್ಳಿ ತಲುಪಿರುತ್ತಾರೆ . ಅಲ್ಲಿಂದ ಬೆಳಿಗ್ಗೆ 10:00 ಗಂಟೆಗೆ ಧಾರವಾಡ ತಲುಪಿ , ವೈದ್ಯಕೀಯ ಪರೀಕ್ಷೆಗೆ ಗಂಟಲು ದ್ರವ ನೀಡಿ ನವನಗರದಲ್ಲಿಯ ತಮ್ಮ ತಂದೆಯ ಮನೆಗೆ ಮಧ್ಯಾಹ್ನ 12:00 ಗಂಟೆಗೆ ತೆರಳಿರುತ್ತಾರೆ . ದಿನಾಂಕ : 17.05.2020 ರಂದು ಬೆಳಿಗ್ಗೆ 11:00 ಗಂಟೆಗೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ಸ್ಥಳಾಂತರಿಸಲಾಗಿರುತ್ತದೆ.
ಪಿ- 1143 ಇವರ ಪ್ರಯಾಣ ವಿವರ
ಪಿ-1143 (25, ಪುರುಷ)ಇವರು ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ ನಿವಾಸಿಯಾಗಿರುತ್ತಾರೆ. ದಿನಾಂಕ : 08.03.2020 ರಂದು ರಾತ್ರಿ 9:30 ಗಂಟೆಗೆ ತಮ್ಮ ಸ್ನೇಹಿತನೊಂದಿಗೆ ಇಂಡಿ ಪಂಪ್ ಸರ್ಕಲ್‌ದಿಂದ ಸ್ಥಳೀಯ ಆಟೋದ ಮೂಲಕ ಹುಬ್ಬಳ್ಳಿ ರೇಲ್ವೆ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ದಿನಾಂಕ : 09.03.2020 ರಂದು ರಾತ್ರಿ 12:30 ಕ್ಕೆ ಮಿರಜ್ ಎಕ್ಸಪ್ರೆಸ್‌ನ ಸಾಮಾನ್ಯ ಬೋಗಿಯಲ್ಲಿ ಇಂಚಲಕರಂಜಿಯನ್ನು ಬೆಳಿಗ್ಗೆ 6:30 ಗಂಟೆಗೆ ತಲುಪಿರುತ್ತಾರೆ. ಅಲ್ಲಿಂದ ಸ್ಥಳೀಯ ಬಸ್ ಮೂಲಕ ಬೆಳಿಗ್ಗೆ 9:30 ಕ್ಕೆ ಮರಕಜ್ ಮಸೀದಿಯನ್ನು ತಲುಪಿರುತ್ತಾನೆ. ಅಲ್ಲಿ ದಿನಾಂಕ 12.03.2020 ರವರೆಗೂ ವಾಸವಾಗಿರುತ್ತಾರೆ . ದಿನಾಂಕ : 12.03.2020 ರಂದು ಮರಕಜ್ ಮಸೀದಿಯಿಂದ ಇಂಚಲಕರಂಜಿಯ ಫಾತಿಮಾ ಮಸೀದಿಗೆ ಹೋಗಿರುತ್ತಾರೆ . ಅಲ್ಲಿಯೇ ದಿ .15.03.2020 ರವರೆಗೂ ವಾಸವಾಗಿರುತ್ತಾರೆ . ದಿನಾಂಕ : 15.03.2020 ರಂದು ಫಾತೀಮಾ ಮಸೀದಿಯಿಂದ ಹೊರಟು ಸ್ಥಳೀಯ ಟೆಂಪೋ ಮೂಲಕ ಅನಸ್ ಮಸೀದಿಯನ್ನು ತಲುಪಿರುತ್ತಾರೆ . ಅಲ್ಲಿ 40 ದಿನ ಜಮಾತ್‌ನಲ್ಲಿ ಭಾಗವಹಿಸಿರುತ್ತಾರೆ.ಲಾಕ್‌ಡೌನ್ ನಂತರ ದಿ .16.05.2020 ರವರೆಗೂ ಅಲ್ಲಿಯೇ ವಾಸವಾಗಿರುತ್ತಾರೆ . ದಿನಾಂಕ : 16.05.2020 ರಂದು ಮುಂಜಾನೆ 8:00 ಕ್ಕೆ ಅನಸ್ ಮಸೀದಿಯವರಿಂದ ವ್ಯವಸ್ಥೆ ಮಾಡಲಾದ ಟೆಂಪೋ ಮೂಲಕ ಇತರ 07 ಜನರೊಂದಿಗೆ ಕೊಲ್ಲಾಪೂರ , ಬೆಳಗಾವಿ ಮಾರ್ಗದ ಮೂಲಕ ಮಧ್ಯಾಹ್ನ 12:00 ಕ್ಕೆ ಧಾರವಾಡ ತಲುಪಿರುತ್ತಾರೆ . ನಂತರ ಇವರನ್ನು ಕ್ವಾರಂಟೈನ್‌ನಲ್ಲಿರಿಸಿ ಮೂಗು ಮತ್ತು ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿರುತ್ತದೆ. ದಿನಾಂಕ : 17.05.2020 ರಂದು ಕೋವಿಡ್ -19 ಸೋಂಕಿತರೆಂದು ದೃಢಪಟ್ಟಿದ್ದರಿಂದ ಬೆಳಿಗ್ಗೆ 8:00 ಗಂಟೆಗೆ ಕಿಮ್ಸ್ ನ ಕೋವಿಡ್ -19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಈ ನಾಲ್ವರು ವ್ಯಕ್ತಿಗಳ ಸಂಪರ್ಕಕ್ಕೆ ಬಂದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದ್ದು , ಅಂತಹ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077 ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ .