ಎರಡೂವರೆ ವರ್ಷದ ಮಗು ಗುಣಮುಖ: ಜಿಲ್ಲೆಯಲ್ಲೀಗ 64ಕ್ಕೇರಿದ ಪಾಸಿಟಿವ್
1 min readಧಾರವಾಡ: ಕೋವಿಡ್ ನಿಂದ ಗುಣಮುಖವಾಗಿರುವ ಪಿ- 2158 (2 ವರ್ಷ 5 ತಿಂಗಳ ಗಂಡು ಮಗು) ಸಂಪೂರ್ಣವಾಗಿ ಗುಣಮುಖವಾಗಿದ್ದು ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಮೇ.25 ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಜಿಲ್ಲೆಯಲ್ಲಿ ಇದುವರೆಗೆ 39 ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಧಾರವಾಡದ ಜಿಲ್ಲೆಯಲ್ಲಿ ಮತ್ತೆ ನಾಲ್ಕು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
DWD 61- ಪಿ- 5482 (46 ವರ್ಷ , ಪುರುಷ) , DWD 61- ಪಿ- 5483 ( 42 ವರ್ಷ, ಮಹಿಳೆ) ಹಾಗೂ DWD 63-ಪಿ-5484 ( 14 ವರ್ಷ ,ಪುರುಷ) ಈ ಮೂವರು ರಾಜಸ್ಥಾನ ರಾಜ್ಯದಿಂದ ಹಿಂದಿರುಗಿರುವ ಹಿನ್ನೆಲೆ ಹೊಂದಿದ್ದಾರೆ. ಹುಬ್ಬಳ್ಳಿ ಮಂಗಳವಾರಪೇಟೆಯ ನಿವಾಸಿಗಳಾಗಿದ್ದು ಹೋಂ ಕ್ವಾರಂಟೈನ್ನಲ್ಲಿದ್ದರು. ಹುಬ್ಬಳ್ಳಿ ಶಾಂತಿನಗರ ವಿನಯ ಕಾಲನಿ ನಿವಾಸಿಯಾಗಿರುವ, DWD 64 -ಪಿ- 5485 ( 04 ವರ್ಷ,ಬಾಲಕಿ) ಇವರಲ್ಲಿ ಸೋಂಕು ದೃಢಪಟ್ಟಿದೆ. ಇವರು ಮಹಾರಾಷ್ಟ್ರ ರಾಜ್ಯ ಪ್ರವಾಸದ ಹಿನ್ನೆಲೆ ಹೊಂದಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 64 ಕ್ಕೆ ಏರಿಕೆಯಾಗಿದೆ. ಈಗಾಗಲೇ 38 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ . ಉಳಿದವರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.