ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 31ಕ್ಕೆ ಏರಿಕೆ

ಧಾರವಾಡ: ತೆಲಂಗಾಣ ಹಾಗೂ ಮಹಾರಾಷ್ಟ್ರದ ಮುಂಬೈನಿಂದ ಪ್ರಯಾಣ ಮಾಡಿರುವ 5 ಜನರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 31ಕ್ಕೇರಿದಂತಾಗಿದೆ.
6 ಹಾಗೂ 9 ವರ್ಷದ ಬಾಲಕಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 4 ಮಂದಿ ಮಹಿಳೆಯರು ಸೇರಿದಂತೆ ಓರ್ವ ಪುರುಷ ಸೇರಿ ಒಟ್ಟು 5 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈಗಾಗಲೇ ಹುಬ್ಬಳ್ಳಿ ಕಿಮ್ಸನಿಂದ 9 ಮಂದಿ ಡಿಸ್ಚಾರ್ಜ ಆಗಿದ್ದು, ಉಳಿದ ಎಲ್ಲರಿಗೂ ಹುಬ್ಬಳ್ಳಿ ಕಿಮ್ಸನಲ್ಲಿ ಚಿಕಿತ್ಸೆ ಮುಂದುವರೆದಿದೆ.