“ದುಬಾರಿ ದುನಿಯಾ” ಹೋರಾಟ: ಧಾರವಾಡದಲ್ಲಿ ವೀಡಿಯೋ ಕಾಲ್ ಮೂಲಕ ಸಂಚಲನ ಮೂಡಿಸಿದ ವಿನಯ ಕುಲಕರ್ಣಿ…!!!!

ಧಾರವಾಡ: ನಗರದಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ಧಾರವಾಡ-71 ಕ್ಷೇತ್ರದ ವತಿಯಿಂದ ನಡೆದ ಹೋರಾಟದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ವೀಡಿಯೋ ಕಾಲ್ ಸಂಚಲನ ಮೂಡಿಸಿದೆ.
ದುಬಾರಿ ದುನಿಯಾ ಹೋರಾಟದ ವೇಳೆಯಲ್ಲಿ ಕಾರ್ಯಕರ್ತರೊಬ್ಬರು ವಿನಯ ಕುಲಕರ್ಣಿಯವರಿಗೆ ವೀಡಿಯೋ ಕಾಲ್ ಮಾಡಿದಾಗ, ಕಾರ್ಯಕರ್ತರು ಜಯಘೋಷ ಹಾಕಿದ ಘಟನೆಯೂ ನಡೆಯಿತು. ಇಲ್ಲಿವೆ ನೋಡಿ ಎಕ್ಸಕ್ಲೂಸಿವ್ ದೃಶ್ಯಾವಳಿಗಳು…
ಬೆಲೆ ಏರಿಕೆ ವಿರೋಧಿಸಿ ಇಂದು ಧಾರವಾಡದ ಜಿಲ್ಲಾಧಿಕಾರಿಗಳವರ ಕಛೇರಿ ಎದುರಿಗೆ ಬ್ಲಾಕ್ ಕಾಂಗ್ರೆಸ್ ಧಾರವಾಡ – 71 ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಮಯದಲ್ಲಿ ಅರವಿಂದ ಏಗನಗೌಡರ ಮಾತನಾಡಿ, ಮುಂಬರುವ ದಿನದಲ್ಲಿ ಬಡವರ ರಕ್ತ ಹೀರುವ ಬಿಜೆಪಿ ನೇತ್ರತ್ವದಲ್ಲಿನ ಕೇಂದ್ರ ಸರ್ಕಾರ ಕಿತ್ತು ಹಾಕಬೇಕು ಎಂದು ಕರೆ ನೀಡಿದರು.
ಧಾರವಾಡ ಗ್ರಾಮಾಂತರ ಅಧ್ಯಕ್ಷ ಅನಿಲಕುಮಾರ ಪಾಟೀಲ, ಬ್ಲಾಕ್ ಶಹರ ಅಧ್ಯಕ್ಷ ಅರವಿಂದ ಏಗನಗೌಡರ, ಗ್ರಾಮೀಣ ಅಧ್ಯಕ್ಷ ಈಶ್ವರ ಶಿವಳ್ಳಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಡಟ್ಟಿ, ಪ್ರಶಾಂತ ಕೇಕರೆ, ರೇಣುಕಾ ಕಳ್ಳಿಮನಿ, ಗೌರಮ್ಮಾ ಬಳ್ಳೊಗಿ, ಬಸವರಾಜ ಜಾಧವ, ಆನಂದ ಸಿಂಗನಾಥ, ಇಮ್ರಾನ್ ಕಳ್ಳಿಮನಿ, ರಾಜು ಕಮತಿ, ನವೀನ ಕದಂ, ನಿಜಾಮ ರಾಹಿ, ನಿರ್ಮಲಾ ಹೊಂಗಲ, ಮನೋಜ ಕರ್ಜಗಿ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.